ಸಂಸತ್ ಭವನದ ರಚನೆ ವಿಶಿಷ್ಟವಾಗಿದ್ದರೂ, ಇಂಥ ಭಾರೀ ಪ್ರಮಾಣದ ಭದ್ರತಾ ಲೋಪ ಜರುಗಿದ್ದು ಆಘಾತಕಾರಿ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2023 | 6:28 PM

ಇದು ಭದ್ರತಾ ಲೋಪವಲ್ಲದೆ ಮತ್ತೇನೂ ಅಲ್ಲ, ಹೊಸ ಸಂಸತ್ ಭವನವನ್ನು ಬಹಳ ವಿಶಿಷ್ಟವಾಗಿ ನಿರ್ಮಿಸಲಾಗಿದೆ, ಇಲ್ಲಿ ಅಂಥ ಲೋಪ ಜರುಗಲು ಅವಕಾಶವೇ ಇರಲ್ಲ, ಕಲಾಪ ವೀಕ್ಷಣೆಗೆ ಪಾಸು ಪಡೆದು ಬರುವವರು 3-4 ಕಡೆ ತಪಾಸಣೆಗೊಳಗಾಗುತ್ತಾರೆ, ಮೊಬೈಲ್ ಫೋನ್, ಅಥವಾ ಒಂದು ಕಾಗದದ ತುಂಡನ್ನು ಸಹ ಅವರು ಒಳಗೆ ತರುವಂತಿಲ್ಲ ಎಂದು ಸುರೇಶ್​ ಹೇಳಿದರು.

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Lok Sabha winter session) ಇಂದು ನಡೆದ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ. ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನೊಂದಿಗೆ ಮಾತಾಡಿದ ಸಂಸದ ಡಿಕೆ ಸುರೇಶ್ (DK Suresh) ಘಟನೆ ನಡೆದಾಗ ಸದನದಲ್ಲಿದ್ದ್ದರು ಮತ್ತು ಮೊದಲಿಗೆ ಅದನ್ನೊಂದು ಅಕಸ್ಮಿಕ ಘಟನೆ ಅಂದುಕೊಂಡಿದ್ದರಂತೆ. ಯುವಕರ ಘೋಷಣೆಗಳನ್ನು ಕೇಳಿಸಿಕೊಂಡಾಗ ಮತ್ತು ಹೊಗೆಯನ್ನು ಅವರು ಸ್ಪ್ರೇ (spray) ಮಾಡಿದಾಗ, ಅವರು ಬೇರೆ ಉದ್ದೇಶ ಇಟ್ಟುಕೊಂಡು ಸಂಸತ್ ಭವನ ಪ್ರವೇಶಿಸಿದ್ದು ಸ್ಪಷ್ಟವಾಯಿತು ಎಂದು ಸುರೇಶ್ ಹೇಳುತ್ತಾರೆ. ಇದು ಭದ್ರತಾ ಲೋಪವಲ್ಲದೆ ಮತ್ತೇನೂ ಅಲ್ಲ, ಹೊಸ ಸಂಸತ್ ಭವನವನ್ನು ಬಹಳ ವಿಶಿಷ್ಟವಾಗಿ ನಿರ್ಮಿಸಲಾಗಿದೆ, ಇಲ್ಲಿ ಅಂಥ ಲೋಪ ಜರುಗಲು ಅವಕಾಶವೇ ಇರಲ್ಲ, ಕಲಾಪ ವೀಕ್ಷಣೆಗೆ ಪಾಸು ಪಡೆದು ಬರುವವರು 3-4 ಕಡೆ ತಪಾಸಣೆಗೊಳಗಾಗುತ್ತಾರೆ, ಮೊಬೈಲ್ ಫೋನ್, ಅಥವಾ ಒಂದು ಕಾಗದದ ತುಂಡನ್ನು ಸಹ ಅವರು ಒಳಗೆ ತರುವಂತಿಲ್ಲ. ಅದರೆ ಈ ಯುವಕರು ಹೊಗೆಯುಗುಳುವ ವಸ್ತುಗನನ್ನು ತಮ್ಮೊಂದಿಗೆ ತಂದಿದ್ದು ನಿಜಕ್ಕೂ ಆಘಾತಕಾರಿ ಸಂಗತಿ ಎಂದು ಸುರೇಶ್ ಹೇಳಿದರು. ಪ್ರಕರಣದ ಕೂಲಂಕಷ ತನಿಖೆ ನಡೆಸಿ ಪ್ರಧಾನ ಮಂತ್ರಿ ಇಲ್ಲವೇ ಲೋಕಸಭಾ ಸ್ಪೀಕರ್ ಸತ್ಯವನ್ನು ಸಾರ್ವಜನಿಕಗೊಳಿಸಬೇಕು ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.