VIDEO: ಅದು ಔಟ್ ಅಲ್ಲಮ್ಮ… ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ

Updated on: Mar 06, 2026 | 9:34 AM

India vs England: ಭಾರತ ತಂಡವು 7 ರನ್​ಗಳ ಗೆಲುವು ದಾಖಲಿಸಿ ಟಿ20 ವಿಶ್ವಕಪ್​ನ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ಗಳಿಸಿದರೆ, ಇಂಗ್ಲೆಂಡ್ 246 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್​ಗಳ ಜಯದೊಂದಿಗೆ ಫೈನಲ್​ ಫೈಟ್​ಗೆ ಅರ್ಹತೆ ಪಡೆದುಕೊಂಡಿದೆ.

ಮಾರ್ಚ್ 5, 2026 ರಂದು ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ, ಸಾಕ್ಷಿ ಧೋನಿ ಅವರ ಸಂಭ್ರಮಕ್ಕೆ ಎಂ.ಎಸ್. ಧೋನಿ ನೀಡಿದ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್​ 18ನೇ ಓವರ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಎಸೆದ ಚೆಂಡನ್ನು ಇಂಗ್ಲೆಂಡ್ ಬ್ಯಾಟರ್ ಸ್ಯಾಮ್ ಕರನ್ ನೇರವಾಗಿ ಬಾರಿಸಿದರು.

ಬುಮ್ರಾ ಅದನ್ನು ಅದ್ಭುತವಾಗಿ ಹಿಡಿದರು. ಇದನ್ನು ನೋಡಿ ಗ್ಯಾಲರಿಯಲ್ಲಿದ್ದ ಸಾಕ್ಷಿ ಅವರು ‘ಕ್ಲೀನ್ ಕ್ಯಾಚ್’ ಎಂದು ಭಾವಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಆದರೆ, ಆ ಚೆಂಡು ಬುಮ್ರಾ ಕೈ ಸೇರುವ ಮೊದಲು ನೆಲಕ್ಕೆ ತಗುಲಿತ್ತು.

ಇತ್ತ ಪತ್ನಿಯ ಈ ಅತಿಯಾದ ಸಂಭ್ರಮವನ್ನು ನೋಡಿದ ಧೋನಿ, ತಮ್ಮ ಎಂದಿನ ‘ಕ್ಯಾಪ್ಟನ್ ಕೂಲ್’ ಶೈಲಿಯಲ್ಲಿ ಅತ್ಯಂತ ಶಾಂತವಾಗಿ “ಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋ” ಎಂಬಂತೆ ಸನ್ನೆ ಮಾಡಿದರು. ಧೋನಿಯ ಈ ಮುಗುಳ್ನಗೆಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

 

Follow Us
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More