IND vs NZ: ಬರೋಬ್ಬರಿ 107 ಮೀ. ಉದ್ದದ ಸಿಕ್ಸರ್ ಸಿಡಿಸಿದ ಪಂತ್! ಹುಚ್ಚೆದ್ದು ಕುಣಿದ ಫ್ಯಾನ್ಸ್; ವಿಡಿಯೋ ನೋಡಿ

|

Updated on: Oct 19, 2024 | 4:54 PM

Rishabh Pant: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಕೇವಲ ಒಂದೇ ಒಂದು ರನ್​ನಿಂದ ಶತಕ ವಂಚಿತರಾದರು. ಆದಾಗ್ಯೂ ಪಂತ್ ಬರೋಬ್ಬರಿ 107 ಮೀಟರ್ ಉದ್ದದ ಸಿಕ್ಸರ್ ಸಿಡಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುಂತೆ ಮಾಡಿದರು. ಪಂತ್ ಸಿಡಿಸಿದ ಈ ಉದ್ದದ ಸಿಕ್ಸರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ ಒಂದೇ ಒಂದು ರನ್​ನಿಂದ ತಮ್ಮ 7ನೇ ಟೆಸ್ಟ್ ಶತಕದಿಂದ ವಂಚಿತರಾಗಿದ್ದಾರೆ. ಆದಾಗ್ಯೂ ಕ್ರೀಸ್​ನಲ್ಲಿ ಇದ್ದಷ್ಟು ಸಮಯ ಪಂತ್, ತಮ್ಮ ಹೊಡಿಬಡಿ ಆಟದ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 105 ಎಸೆತಗಳನ್ನು ಎದುರಿಸಿದ ಪಂತ್, 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳನ್ನು ಸಹ ಸಿಡಿಸಿದರು. ಇದರಲ್ಲಿ ಶತಕದಂಚಿನಲ್ಲಿ ಸಿಡಿಸಿದ ಅದೊಂದು ಸಿಕ್ಸರ್​ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ವಾಸ್ತವವಾಗಿ ರಿಷಬ್ ಪಂತ್ 99 ಎಸೆತಗಳಲ್ಲಿ 90 ರನ್ ಗಳಿಸಿ ಆಡುತ್ತಿದ್ದ ವೇಳೆ ಕಿವೀಸ್ ಅನುಭವಿ ವೇಗಿ ಟಿಮ್ ಸೌಥಿ ದಾಳಿಗಿಳಿದರು. ಈ ವೇಳೆ ಪಂತ್, ಓವರ್​ನ ಮೂರನೇ ಎಸೆತವನ್ನು ಡೀಪ್ ಮಿಡ್ ವಿಕೆಟ್​ಗೆ ಬರೋಬ್ಬರಿ 107 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಪಂತ್ ಪವರ್ ಹೇಗಿತ್ತೆಂದರೆ ಚೆಂಡು ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಛಾವಣಿಗೆ ಬಿದ್ದಿತ್ತು. ಪಂತ್ ಅವರ ಈ ಶಾಟ್ ನೋಡಿದ ಅಭಿಮಾನಿಗಳು ಒಂದೆಡೆ ಖುಷಿ ಪಟ್ಟರೆ ಇನ್ನೊಂದೆಡೆ ಕಿವೀಸ್ ಆಟಗಾರರು ಕೂಡ ಆಶ್ಚರ್ಯಚಕಿತರಾಗಿ ಪಂತ್ ಸಿಡಿಸಿದ ಬಿಗ್ ಸಿಕ್ಸರ್​ ಅನ್ನು ನೋಡುತ್ತಾ ನಿಂತರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Sat, 19 October 24

Follow us on