ಫೈಬರ್ ಕೇಬಲ್‌ಗಳೇ ಕಳ್ಳರ ಟಾರ್ಗೆಟ್: ಲಾಹೋರ್ ಇಂಟರ್ನೆಟ್ ಕಡಿತದ ಹಿಂದೆ ಅಡಗಿದೆ ಸ್ಕ್ರ್ಯಾಪ್ ಮಾಫಿಯಾ

Updated on: May 05, 2026 | 8:27 AM

ಪಾಕಿಸ್ತಾನದ ರಾಜಧಾನಿ ಲಾಹೋರ್‌ನ ಅನೇಕ ನಿವಾಸಿಗಳು ಇತ್ತೀಚಿನ ದಿನಗಳಲ್ಲಿ ನಿರಂತರ ಇಂಟರ್ನೆಟ್ ಕಡಿತದ ಸಮಸ್ಯೆಯಿಂದ ಹೈರಾಣಾಗಿದ್ದರು. ಮೊದಲು ಇದನ್ನು ತಾಂತ್ರಿಕ ದೋಷ ಅಥವಾ ವಿದ್ಯುತ್ ವ್ಯತ್ಯಯದ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ, ಈ ವ್ಯವಸ್ಥಿತ ಇಂಟರ್ನೆಟ್ ಸ್ಥಗಿತದ ಹಿಂದೆ ಸ್ಕ್ರ್ಯಾಪ್ ಕಳ್ಳರ ಜಾಲವಿರುವುದು ತನಿಖೆಯ ವೇಳೆ ಬಯಲಾಗಿದೆ. ಲಾಹೋರ್‌ನ ವಿವಿಧ ಬಡಾವಣೆಗಳಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು.

ಲಾಹೋರ್, ಮೇ 05: ಪಾಕಿಸ್ತಾನದ ರಾಜಧಾನಿ ಲಾಹೋರ್‌ನ ಅನೇಕ ನಿವಾಸಿಗಳು ಇತ್ತೀಚಿನ ದಿನಗಳಲ್ಲಿ ನಿರಂತರ ಇಂಟರ್ನೆಟ್ ಕಡಿತದ ಸಮಸ್ಯೆಯಿಂದ ಹೈರಾಣಾಗಿದ್ದರು. ಮೊದಲು ಇದನ್ನು ತಾಂತ್ರಿಕ ದೋಷ ಅಥವಾ ವಿದ್ಯುತ್ ವ್ಯತ್ಯಯದ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ, ಈ ವ್ಯವಸ್ಥಿತ ಇಂಟರ್ನೆಟ್ ಸ್ಥಗಿತದ ಹಿಂದೆ ಸ್ಕ್ರ್ಯಾಪ್ ಕಳ್ಳರ ಜಾಲವಿರುವುದು ತನಿಖೆಯ ವೇಳೆ ಬಯಲಾಗಿದೆ.
ಲಾಹೋರ್‌ನ ವಿವಿಧ ಬಡಾವಣೆಗಳಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು.

ಇದರಿಂದಾಗಿ ಸಾವಿರಾರು ಗ್ರಾಹಕರು, ವಿಶೇಷವಾಗಿ ಮನೆಯಿಂದ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳು ಭಾರಿ ತೊಂದರೆ ಅನುಭವಿಸಿದ್ದರು. ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ಪರಿಶೀಲಿಸಿದಾಗ, ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ವ್ಯವಸ್ಥಿತವಾಗಿ ಕತ್ತರಿಸಿ ಕಳವು ಮಾಡಿರುವುದು ಕಂಡುಬಂದಿದೆ.

ಇಂಟರ್ನೆಟ್ ಪೂರೈಕೆಗೆ ಬಳಸುವ ಫೈಬರ್ ಆಪ್ಟಿಕ್ ಕೇಬಲ್‌ಗಳು ಸ್ಕ್ರ್ಯಾಪ್ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಎಂಬ ಅಂಶ ಕಳ್ಳರ ಗಮನಕ್ಕೆ ಬಂದಿದೆ. ಕೇಬಲ್‌ಗಳ ಒಳಭಾಗದಲ್ಲಿರುವ ಲೋಹದ ಅಂಶಗಳು ಮತ್ತು ವಿಶೇಷ ಸಂಯುಕ್ತಗಳಿಗೆ ಹಳೆಯ ಕಬ್ಬಿಣದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಈ ಹಣದ ಆಸೆಗೆ ಬಿದ್ದ ಕಳ್ಳರು ಇಡೀ ನಗರದ ಇಂಟರ್ನೆಟ್ ಜಾಲವನ್ನೇ ಹದಗೆಡಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: May 05, 2026 08:26 AM
Follow Us