PBKS vs LSG: ಪಂದ್ಯ ಸೋತರೂ ಪ್ರೇಕ್ಷಕರ ಮನ ಗೆದ್ದ ಪಂತ್ ಬಾರಿಸಿದ ಸಿಕ್ಸರ್

Updated on: Apr 19, 2026 | 11:43 PM

Rishabh Pant one-handed six: ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ಅನ್ನು 54 ರನ್‌ಗಳಿಂದ ಸೋಲಿಸಿತು. ಪಂಜಾಬ್ 254 ರನ್ ಗಳಿಸಿದರೆ, ಲಕ್ನೋ ತಂಡ 200 ರನ್‌ಗಳಿಗೆ ಸೀಮಿತವಾಯಿತು. ಲಕ್ನೋ ಪರ ಏಕಾಂಗಿ ಹೋರಾಟ ನೀಡಿದ ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 43 ರನ್ ಬಾರಿಸಿದರು. ಅವರು ಒಂದು ಕೈನಲ್ಲಿ ಬಾರಿಸಿದ ಅದ್ಭುತ ಸಿಕ್ಸರ್ ಪಂದ್ಯದ ಪ್ರಮುಖ ಹೈಲೈಟ್ ಆಗಿತ್ತು.

ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ 200 ರನ್ ಕಲೆಹಾಕಲಷ್ಟೇ ಶಕ್ತವಾಗಿ 54 ರನ್​​ಗಳಿಂದ ಪಂದ್ಯ ಸೋತಿತು. ಆದಾಗ್ಯೂ ಲಕ್ನೋ ತಂಡದ ಪರ ಏಕಾಂಗಿ ಹೋರಾಟ ನೀಡಿದ ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 43 ರನ್ ಬಾರಿಸಿ ಔಟಾದರು.

ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್, ಮಾರ್ಕೋ ಯಾನ್ಸನ್ ಬೌಲ್ ಮಾಡಿದ ಈ ಓವರ್​ನ 4ನೇ ಎಸೆತವನ್ನು ಪಂತ್ ಸಿಕ್ಸರ್​ಗಟ್ಟಿದರು. ಆ ನಂತರದ ಅಂದರೆ ಐದನೇ ಎಸೆತವನ್ನು ಪಂತ್ ಲಾಂಗ್ ಆಫ್​​ನಲ್ಲಿ ಭರ್ಜರಿ ಸಿಕ್ಸರ್​ಗಟ್ಟಿದರು. ಪಂತ್ ಬಾರಿಸಿದ ಈ ಸಿಕ್ಸರ್​​ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಏಕೆಂದರೆ ಪಂತ್ ಈ ಸಿಕ್ಸರ್​ ಅನ್ನು ಕೇವಲ ಒಂದು ಕೈನಿಂದ ಬಾರಿಸಿದರು.

Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More