GT vs MI: ಮೊದಲ ಎಸೆತದಲ್ಲೇ ವಿಕೆಟ್; ಕೊನೆಗೂ ವಿಕೆಟ್ ಬರ ನೀಗಿಸಿಕೊಂಡ ಬುಮ್ರಾ
Jasprit Bumrah Ends IPL 2026 Wicket Drought: 2026ರ ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ ವಿಕೆಟ್ ಬರ ಎದುರಿಸುತ್ತಿದ್ದರು. ಅಹಮದಾಬಾದ್‌ನಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ, ಬುಮ್ರಾ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡುವ ಮೂಲಕ ಈ ಸಮಸ್ಯೆಗೆ ಕೊನೆ ಹಾಡಿದರು. 5 ಪಂದ್ಯಗಳಲ್ಲಿ 19 ಓವರ್‌ಗಳ ಬಳಿಕ ಬಂದ ಈ ವಿಕೆಟ್, ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಉತ್ತೇಜನ ನೀಡಿದೆ.
2026 ರ ಐಪಿಎಲ್‌ನಲ್ಲಿ ವಿಕೆಟ್ ಬರ ಎದುರಿಸುತ್ತಿದ್ದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೊನೆಗೂ ತಮ್ಮ ವಿಕೆಟ್ ಖಾತೆ ತೆರೆದಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ತಿಲಕ್ ವರ್ಮಾ ಅವರ ಶತಕದ ನೆರವಿನಿಂದ 199 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ಗೆ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಆಘಾತ ನೀಡಿದರು.
ಬರೋಬ್ಬರಿ 4 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಬೌಲ್ ಮಾಡಿದ ಬುಮ್ರಾ ಗುಜರಾತ್ ತಂಡದ ಆರಂಭಿಕ ಸಾಯಿ ಸುದರ್ಶನ್ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದರು. ಈ ಮೂಲಕ 2026 ರ ಐಪಿಎಲ್‌ನಲ್ಲಿ ಬರೋಬ್ಬರಿ 5 ಪಂದ್ಯಗಳ ಬಳಿಕ ಮೊದಲ ವಿಕೆಟ್ ಉರುಳಿಸಿದರು. ಈ ಹಿಂದೆ ಆಡಿದ್ದ 5 ಪಂದ್ಯಗಳಲ್ಲಿ 19 ಓವರ್ಗಳನ್ನು ಅಂದರೆ 114 ಎಸೆತಗಳನ್ನು ಬೌಲ್ ಮಾಡಿದ್ದ ಬುಮ್ರಾ ರನ್ಗಳಿಗೆ ಕಡಿವಾಣ ಹಾಕಿದ್ದರಾದರೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೀಗ ಗುಜರಾತ್ ವಿರುದ್ಧ ತಮ್ಮ ವಿಕೆಟ್ ಖಾತೆ ತೆರೆದಿದ್ದಾರೆ.