ಯಡಿಯೂರಪ್ಪನವರ ಹುಟ್ಟುಹಬ್ಬದಂದೇ ಪ್ರಧಾನಿ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸುತ್ತಿರುವುದು ನಮ್ಮ ಸೌಭಾಗ್ಯ: ಬಿವೈ ವಿಜಯೇಂದ್ರ
ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರುವಲ್ಲಿ ಸಂಸದ ಮತ್ತು ತಮ್ಮ ಸಹೋದರ ಬಿ ವೈ ರಾಘವೇಂದ್ರರ ಕೊಡುಗೆಯನ್ನು ಸಹ ವಿಜಯೇಂದ್ರ ನೆನೆದರು.
ಶಿವಮೊಗ್ಗ: ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ (BY Vijayendra) ತಮ್ಮ ತಂದೆ ಬಿಎಸ್ ಯಡಿಯೂರಪ್ಪನವರ (BS Yediyurappa) ಹುಟ್ಟುಹಬ್ಬ ಮತ್ತು ಇದೇ ದಿನ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಯಾಗುತ್ತಿರುವ ಬಗ್ಗೆ ಬಹಳ ಹೆಮ್ಮೆ ಮತ್ತು ಅಭಿಮಾನದಿಂದ ಮಾತಾಡಿದರು. ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಮತ್ತು ಅವರ ಕನಸಿನ ವಿಮಾನ ನಿಲ್ದಾಣವನನ್ನು ನಾಡಿಗೆ ಸಮರ್ಪಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಆಗಮಿಸುತ್ತಿದ್ದಾರೆ, ರಾಜ್ಯದ ಜನತೆಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೇನಿದೆ ಎಂದು ವಿಜಯೇಂದ್ರ ಹೇಳಿದರು. ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರುವಲ್ಲಿ ಸಂಸದ ಮತ್ತು ತಮ್ಮ ಸಹೋದರ ಬಿ ವೈ ರಾಘವೇಂದ್ರರ ಕೊಡುಗೆಯನ್ನು ಸಹ ವಿಜಯೇಂದ್ರ ನೆನೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ