‘ಪೆದ್ದಿ’ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲೇ ತಿರುಪತಿ ಬೆಟ್ಟ ಹತ್ತಿದ ಜಾನ್ವಿ ಕಪೂರ್

Updated on: Jun 04, 2026 | 8:54 AM

ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಹೊಸ ಸಿನಿಮಾ 'ಪೆದ್ದಿ' (Peddi) ಬಿಡುಗಡೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಪವಿತ್ರ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಮೆಟ್ಟಿಲುಗಳ ಮಾರ್ಗವಾಗಿ ನಡೆದುಕೊಂಡೇ ಬೆಟ್ಟ ಹತ್ತಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ರಾಮ್ ಚರಣ್, ಜಾನ್ವಿ ಕಪೂರ್ ಮೊದಲಾದವರು ನಟಿಸಿರುವ ‘ಪೆದ್ದಿ’ ಇಂದು (ಜೂನ್ 4) ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಜಾನ್ವಿ ಕಪೂರ್ ಅವರು ಆಂಧ್ರಪ್ರದೇಶದ ಪವಿತ್ರ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಮೆಟ್ಟಿಲುಗಳ ಮಾರ್ಗವಾಗಿ ನಡೆದುಕೊಂಡೇ ಬೆಟ್ಟ ಹತ್ತಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿ ಬಾರಿಯೂ ತಮ್ಮ ಯಾವುದೇ ಹೊಸ ಸಿನಿಮಾ ತೆರೆಗೆ ಬರುವ ಮುನ್ನ ತಿರುಪತಿಗೆ ಭೇಟಿ ನೀಡುವುದನ್ನು ಜಾನ್ವಿ ಕಪೂರ್ ರೂಢಿಸಿಕೊಂಡಿದ್ದಾರೆ. ಈ ವಿಶೇಷ ಸಂಪ್ರದಾಯವನ್ನು ಅವರು ಸತತವಾಗಿ ಪಾಲಿಸುತ್ತಾ ಬಂದಿದ್ದಾರೆ. ಈ ಭಕ್ತಿಯ ನಡೆ ಅವರ ಸಿನಿಮಾಗಳ ಮೇಲಿರುವ ಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಹಿಂದೆ ತಮ್ಮ ಚೊಚ್ಚಲ ಚಿತ್ರ ‘ಧಡಕ್’ ಬಿಡುಗಡೆಯ ಮುನ್ನ ತಂದೆ ಬೋನಿ ಕಪೂರ್ ಜೊತೆ ಜಾನ್ವಿ ಇಲ್ಲಿಗೆ ಬಂದಿದ್ದರು. ಇತ್ತೀಚಿನ ‘ದೇವರ’ ಮತ್ತು ‘ಪರಂ ಸುಂದರಿ’ ಚಿತ್ರಗಳ ಬಿಡುಗಡೆಯ ವೇಳೆಯೂ ಅವರು ತಿರುಪತಿಗೆ ಭೇಟಿ ನೀಡಿದ್ದರು. ಅವರ ತಾಯಿ, ದಿವಂಗತ ನಟಿ ಶ್ರೀದೇವಿ ಅವರೂ ಸಹ ಪ್ರತಿ ವರ್ಷ ತಮ್ಮ ಜನ್ಮದಿನದಂದು ತಿರುಪತಿಗೆ ಭೇಟಿ ನೀಡುವ ಸಂಪ್ರದಾಯ ಹೊಂದಿದ್ದರು. ತಾಯಿಯ ಅಗಲಿಕೆಯ ನಂತರ ಜಾನ್ವಿ ಕಪೂರ್ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More