ಒಮ್ಮೆ ಕಬಡ್ಡಿ ಆಡುವ ಮತ್ತೊಮ್ಮೆ ಭೀಮನ ಡೈಲಾಗ್ ಹೇಳುವ ಶಾಸಕ ಶಿವಲಿಂಗೇಗೌಡ ಬಹುಮುಖ ಪ್ರತಿಭೆಯ ವ್ಯಕ್ತಿ!
ಅದರರ್ಥ ಅವರಿಗೆ ಪೌರಾಣಿಕ ನಾಟಕಗಳಲ್ಲಿ ಪಾರ್ಟು ಮಾಡಿದ ಅನುಭವವೂ ಇದೆ. ಅವರು ಡೈಲಾಗ್ ಹೇಳುವ ಶೈಲಿಯಲ್ಲೇ ಅದು ಗೊತ್ತಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಅವರಿಗೆ ಡೈಲಾಗ್ ನೆನಪಿದೆ.
ಅರಸೀಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡರು (Shivalingegowda) ನಿಸ್ಸಂದೇಹವಾಗಿ ಒಬ್ಬ ಬಹುಮುಖ ಪ್ರತಿಭೆಯ (multi-faceted) ವ್ಯಕ್ತಿ ಮಾರಾಯ್ರೇ. ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದಾರೆ (Parliamentarian) ಅಂತ ನಾವು ಈ ಹಿಂದೆ ಚರ್ಚಿಸಿದ್ದೇವೆ. ಅವರ ವಿಧಾನ ಸಭೆಯಲ್ಲಿ ಯಾವುದಾದರೂ ವಿಷಯಯದ ಬಗ್ಗೆ ಮಾತಾಡುತ್ತಿದ್ದಾರೆ ಉಳಿದೆಲ್ಲ ಪಕ್ಷಗಳ ಸದಸ್ಯರು ಗಮನವಿಟ್ಟು ಕೇಳುತ್ತಾರೆ. ಅವರಾಡುವ ಮಾತು ನೇರ ಮತ್ತು ನಿಷ್ಠುರ. ಒಮ್ಮೆ ಒಂದು ಸಾರ್ವಜನಿಕ ಸಭೆಯಲ್ಲಿ ಅವರ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನೇ ನೀವು ಸುಮ್ಮನಿರಿ ನಾನೆಲ್ಲ ಮಾತಾಡ್ತೀನಿ ಅಂತ ಹೇಳಿದ ಮಹಾನುಭಾವ ಇವರು. ಅವರ ಮತಕ್ಷೇತ್ರದಲ್ಲಿ ಬರುವ ಪಡುವನಹಳ್ಳಿಯಲ್ಲಿ ಇತ್ತೀಚಿಗೆ ಒಂದು ಪೌರಾಣಿಕ ನಾಟಕವನ್ನು ಆಡಲಾಯಿತು. ಪ್ರಾಯಶಃ ದ್ರೌಪದಿಯ ವಸ್ತ್ರಹರಣದ ಪ್ರಸಂಗವಿರಬಹುದು ಅನಿಸುತ್ತದೆ. ಯಾಕೆಂದರೆ ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಹೋಗಿದ್ದ ಶಿವಲಿಂಗೇಗೌಡರು ನಾಟಕ ಆರಂಭವಾಗುವ ಮುನ್ನ ಅದರಲ್ಲಿ ಭೀಮನ ಡೈಲಾಗನ್ನು ನಿರಗರ್ಳವಾಗಿ ಹೇಳುತ್ತಾರೆ.
ಅದರರ್ಥ ಅವರಿಗೆ ಪೌರಾಣಿಕ ನಾಟಕಗಳಲ್ಲಿ ಪಾರ್ಟು ಮಾಡಿದ ಅನುಭವವೂ ಇದೆ. ಅವರು ಡೈಲಾಗ್ ಹೇಳುವ ಶೈಲಿಯಲ್ಲೇ ಅದು ಗೊತ್ತಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಅವರಿಗೆ ಡೈಲಾಗ್ ನೆನಪಿದೆ. ಅದೇನು ಒಂದೆರಡು ವಾಕ್ಯಗಳ ಡೈಲಾಗಲ್ಲ ಮಾರಾಯ್ರೇ. ಬಹಳ ಉದ್ದವಾದ ಡೈಲಾಗ್ ಅದು. ಸಮಸ್ಯೆ ಏನೆಂದರೆ, ಈ ವಿಡಿಯೋದ ಆಡಿಯೊ ಕ್ವಾಲಿಟಿ ಸರಿಯಾಗಿಲ್ಲ ಹಾಗಾಗಿ ಅವರು ಹೇಳುತ್ತಿರುವುದು ನಮಗೆ ಅರ್ಧಂಬರ್ಧ ಕೇಳಿಸುತ್ತದೆ. ಏನೇ ಆಗಲಿ ಅವರ ಪ್ರತಿಭೆಗೆ, ಗದೆ ಚಲಾಯಿಸುವ ಶೈಲಿಗೆ ನಮ್ಮದೊಂದು ಸಲಾಂ.
ಮಹಾ ಶಿವರಾತ್ರಿಯಂದು ಅವರು ತಮ್ಮ ಕ್ಷೇತ್ರದ ಒಂದೂರಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲೂ ಭಾಗವಹಿಸಿದ್ದರು. ಪಂದ್ಯ ಆರಂಭವಾಗುವ ಮುನ್ನ ಅವರು ಕಬಡ್ಡಿ ಕಬಡ್ಡಿ ಅನ್ನುತ್ತಾ ರೈಡ್ ಗೆ ಹೋಗುತ್ತಾರೆ. ಇದನ್ನು ನಾವು ಈ ಹಿಂದೆ ಚರ್ಚಿಸಿದ್ದೇವೆ. ಇದನ್ನು ಮತ್ತೊಮ್ಮೆ ಹೇಳುವ ತಾತ್ಪರ್ಯವೆಂದರೆ ಶಿವಲಿಂಗೇಗೌಡರು ಬಹುಮುಖ ಪ್ರತಿಭೆಯ ವ್ಯಕ್ತಿ.
ಇದನ್ನೂ ಓದಿ: IPL 2022: ಬಾಂಬ್ ಎಕ್ಸ್ಪರ್ಟ್ ಪಾಂಡ್ಯ! ಐಪಿಎಲ್ ಆರಂಭಕ್ಕೂ ಮುನ್ನ ಹೊಸ ಅವತಾರ ತಾಳಿದ ಹಾರ್ದಿಕ್; ವಿಡಿಯೋ