ರೆಸಾರ್ಟ್ ನಿಂದ ವಿಧಾನ ಸೌಧಕ್ಕೆ ಆಗಮಿಸಿದ ಜೆಡಿ(ಎಸ್) ಶಾಸಕರನ್ನು ಅನಿತಾ ಕುಮಾರಸ್ವಾಮಿ ಬರಮಾಡಿಕೊಂಡರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2022 | 2:04 PM

ಈ ವಿಡಿಯೋಲ್ಲಿ ಪಕ್ಷದ ಅಧ್ಯಕ್ಷ ಸಿ ಎಮ್ ಇಬ್ರಾಹಿಂ ಅವರನ್ನೂ ನೋಡಬಹುದು. ಯಾವ ಶಾಸಕನೂ ಅತ್ತಿತ್ತ ಜಾರದಂತೆ ನಿಗಾವಹಿಸುವುದು ಅನಿತಾ ಅವರ ಜವಾಬ್ದಾರಿಯಾಗಿತ್ತು.

Bengaluru:  ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ರಾಮನಗರದ ಶಾಸಕರಾದರೂ ಸಾರ್ವಜನಿಕ ಬದುಕಿನಲ್ಲಿ ಬಹಳ ಕಡಿಮೆ ಕಾಣಿಸಿಕೊಳ್ಳುತ್ತಾರೆ. ಆದರೆ ಶುಕ್ರವಾರ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿರುವ ಸಂದರ್ಭ ಮತ್ತು ಅದರಲ್ಲೂ ವಿಶೇಷವಾಗಿ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರನ್ನು (Kupendra Reddy) ಗೆಲ್ಲಿಸುವುದು ಪ್ರತಿಷ್ಠೆಯಾಗಿರುವ ಹಿನ್ನೆಲೆಯಲ್ಲಿ ಅವರು ವಿಧಾನ ಸಭೆ ಶುಕ್ರವಾರ ಬೆಳಗ್ಗೆ ವಿಧಾನ ಸೌಧದ ಮೊಗಸಾಲೆಯಲ್ಲಿ ನಿಂತು ರೆಸಾರ್ಟ್ ನಿಂದ ನೇರವಾಗಿ ಅಲ್ಲಿಗೆ ಆಗಮಿಸಿದ ಜೆಡಿ(ಎಸ್) ಶಾಸಕರನ್ನು ಬರಮಾಡಿಕೊಂಡರು. ಈ ವಿಡಿಯೋಲ್ಲಿ ಪಕ್ಷದ ಅಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಅವರನ್ನೂ ನೋಡಬಹುದು. ಯಾವ ಶಾಸಕನೂ ಅತ್ತಿತ್ತ ಜಾರದಂತೆ ನಿಗಾವಹಿಸುವುದು ಅನಿತಾ ಅವರ ಜವಾಬ್ದಾರಿಯಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on