ಜಂಬೂ ಸವಾರಿಗಾಗಿ ಹೆಗಲ ಮೇಲೆ ಭಾರೀ ತೂಕಹೊತ್ತು ನಡೆಯುವ ತಾಲೀಮು ಆರಂಭಿಸಿದ ಅಭಿಮನ್ಯು ಮತ್ತು ಟೀಮ್

ಅರುಣ್​ ಕುಮಾರ್​ ಬೆಳ್ಳಿ

Updated on: Sep 25, 2023 | 12:41 PM

ಟೀಮ್ ಲೀಡರ್ ಅಭಿಮನ್ಯು ತನ್ನ ಹೆಗಲ ಮೇಲೆ ಅಂಬಾರಿಯಷ್ಟು ಭಾರದ ಮರಳು ಚೀಲಗಳನ್ನು ಹೊತ್ತು ಮುಂದೆ ನಡೆಯುತ್ತಿದ್ದರೆ ತಂಡದ ಉಳಿದ ಸದಸ್ಯರು ಅವನ ಹಿಂದೆ ಶಿಸ್ತಿನ ಸಿಪಾಯಿಗಳಂತೆ ಫಾಲೋ ಮಾಡುತ್ತಿದ್ದಾರೆ. ಆನೆಗಳು ಮಾರ್ಕೆಟ್ ಪ್ರದೇಶ ಪ್ರವೇಶಿಸಿದಾಗ ಹೂ ಮಾರುವವರು ಮಾಲೆಗಳನ್ನು ಅವುಗಳ ಮೇಲೆ ಕೂತಿರುವ ಮಾವುತರ ಕಡೆ ಎಸೆದರು.

ಮೈಸೂರು: ನಾಡಹಬ್ಬ ದಸರಾಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿ ಬಾಕಿಯಿದೆ. ಮೈಸೂರಲ್ಲ್ಲಿ ನಡೆಯವ ದಸರಾ ಸಂಭ್ರಮ (Dasara Utsav) ಕೇವಲ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಪ್ರಸಿದ್ಧ. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯಲ್ಲಿ (Jambo Savari) ಪಾಲ್ಗೊಳ್ಳುವ ಅವತ್ತು ಅಂಬಾರಿ ಹೊರಲಿರುವ ಅಭಿಮನ್ಯು (Abhimanyu) ಸಾರಥ್ಯದ ಗಜೆಪಡೆಗೆ ಎರಡು ವಾರಗಳಿಂದ ತಾಲೀಮು ಶುರುವಾಗಿದೆ. ಜಂಬೂ ಸವಾರಿ ನಡೆಯುವ ಅರಮನೆಯಿಂದ ಬನ್ನಿಮಂಟಪದವರೆಗಿನ ರಸ್ತೆಯಲ್ಲಿ ಇಂದು ಬೆಳಗ್ಗೆ ಆನೆಗಳಿಗೆ ಅಭ್ಯಾಸ ಮಾಡಿಸಲಾಯಿತು. ಟೀಮ್ ಲೀಡರ್ ಅಭಿಮನ್ಯು ತನ್ನ ಹೆಗಲ ಮೇಲೆ ಅಂಬಾರಿಯಷ್ಟು ಭಾರದ ಮರಳು ಚೀಲಗಳನ್ನು ಹೊತ್ತು ಮುಂದೆ ನಡೆಯುತ್ತಿದ್ದರೆ ತಂಡದ ಉಳಿದ ಸದಸ್ಯರು ಅವನ ಹಿಂದೆ ಶಿಸ್ತಿನ ಸಿಪಾಯಿಗಳಂತೆ ಫಾಲೋ ಮಾಡುತ್ತಿದ್ದಾರೆ. ಆನೆಗಳು ಮಾರ್ಕೆಟ್ ಪ್ರದೇಶ ಪ್ರವೇಶಿಸಿದಾಗ ಹೂ ಮಾರುವವರು ಮಾಲೆಗಳನ್ನು ಅವುಗಳ ಮೇಲೆ ಕೂತಿರುವ ಮಾವುತರ ಕಡೆ ಎಸೆದರು. ಆನೆಗಳಿಗೆ ದಣಿವು ತಣಿಯಲು ಕಬ್ಬು ನೀಡುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.