ಮೈಸೂರು ದಸರಾ 2022: ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ನಡೆಯಲು ತಯಾರಾಗುತ್ತಿರುವ ಅಭಿಮನ್ಯುವನ್ನು ನೋಡಿದ್ದೀರಾ?
ಮೈಸೂರಿನ ಕಲಾವಿದರು ಅಭಿಮನ್ಯುಗೆ ಅಲಂಕಾರ ಮಾಡಿದ್ದಾರೆ. ಅಂಬಾರಿಯನ್ನು ಅವನ ಕತ್ತಿನ ಮೇಲ್ಭಾಗದಿಂದ ಜಾರದ ಹಾಗೆ ಮಾಡಲು ಮಾವುತರು ಹೊದಿಕೆಗಳನ್ನು ಕಟ್ಟುತ್ತಿದ್ದಾರೆ.
ಮೈಸೂರು: ಜಂಬೂಸವಾರಿಯಲ್ಲಿ ಅಂಬಾರಿಯನ್ನು (Howdah) ಹೊರಲಿರುವ ಅಭಿಮನ್ಯುವನ್ನು (Abhimanyu) ನೋಡಲು ಎರಡು ಕಣ್ಣು ಸಾಲದು ಮಾರಾಯ್ರೇ. ಆದರ ದೈತ್ಯ ಗಾತ್ರ (mammoth size) ನೋಡಿ ನಾವು ಈ ಮಾತನ್ನ ಹೇಳುತ್ತಿಲ್ಲ. ಅದಕ್ಕೆ ಮಾಡಿರುವ ಸಿಂಗಾರವನ್ನೊಮ್ಮೆ ನೋಡಿ. ಮೈಸೂರಿನ ಕಲಾವಿದರು ಅಭಿಮನ್ಯುಗೆ ಅಲಂಕಾರ ಮಾಡಿದ್ದಾರೆ. ಅಂಬಾರಿಯನ್ನು ಅವನ ಕತ್ತಿನ ಮೇಲ್ಭಾಗದಿಂದ ಜಾರದ ಹಾಗೆ ಮಾಡಲು ಮಾವುತರು ಹೊದಿಕೆಗಳನ್ನು ಕಟ್ಟುತ್ತಿದ್ದಾರೆ. ಇನ್ನು ಸ್ವಲ್ಪ ಹೊತ್ತಿನ ನಂತರ ಅವನು ಅಂಬಾರಿಯನ್ನು ಹೊತ್ತು ತನ್ನ ಎಂದಿನ ಗಾಂಭೀರ್ಯದೊಂದಿಗೆ ಮೈಸೂರಿನ ಪ್ರಮುಖ ಬೀದಿಗಳಲ್ಲಿ ರಾರಾಜಿಸಲಿದ್ದಾನೆ.
Latest Videos