ಮಂಡ್ಯ ಬಳಿ ಹೆದ್ದಾರಿ ಅಡ್ಡಗಟ್ಟಿ ರೈತರ ಪ್ರತಿಭಟನೆ, ದಸರಾ ವೀಕ್ಷಿಸಲು ಮೈಸೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಸಂಕಷ್ಟ!
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಸರ್ಕಾರ ರೈತರನ್ನು ದೈನೇಸಿ ಸ್ಥಿತಿಗೆ ತಳ್ಳಿ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ: ಕರ್ನಾಟಕ ರಾಜ್ಯ ಸಂಘದ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಉತ್ತಮ ದಿನವನ್ನೇ ಆಯ್ದುಕೊಂಡಿದ್ದಾರೆ. ಮೈಸೂರಿನಲ್ಲಿ ಇಂದ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿ (Jumbo Savari), ಪಂಜಿನ ಕವಾಯತು ಮತ್ತು ಇತರ ಕಾರ್ಯಕ್ರಮಗಳನ್ನು ವೀಕ್ಷಿಸಲು ದೇಶದ ನಾನಾಭಾಗಗಳಿಂದ ಲಕ್ಷಾಂತರ ಜನ ಮೈಸೂರು ಕಡೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ರೈತರು ಮಂಡ್ಯದ ಬಳಿ ಹೆದ್ದಾರಿಯನ್ನು (highway) ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಸರ್ಕಾರ ರೈತರನ್ನು ದೈನೇಸಿ ಸ್ಥಿತಿಗೆ ತಳ್ಳಿ ಅಗತ್ಯ ವಸ್ತುಗಳ (essential commodities) ಬೆಲೆ ದುಪ್ಪಟ್ಟು ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯುತ್ತಿದೆ.
Published on: Oct 05, 2022 10:47 AM
Latest Videos