Kaddipudi Chandru: ನಿರ್ದೇಶಕ ಪಿ.ಸಿ. ಶೇಖರ್​ ಹೊರಿಸಿದ ವಂಚನೆ ಆರೋಪಕ್ಕೆ ನಿರ್ಮಾಪಕ ಕಡ್ಡಿಪುಡಿ ಚಂದ್ರು ಸ್ಪಷ್ಟನೆ

Updated on: May 21, 2023 | 11:23 AM

‘ಲವ್​ ಬರ್ಡ್ಸ್​’ ಚಿತ್ರತಂಡದ ನಿರ್ದೇಶಕ ಪಿ.ಸಿ. ಶೇಖರ್​ ಅವರು ಕಡ್ಡಿಪುಡಿ ಚಂದ್ರು ವಿರುದ್ಧ ದೂರು ನೀಡಿದ್ದಾರೆ. ಆ ಕುರಿತು ಕಡ್ಡಿಪುಡಿ ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ.

‘ಲವ್​ ಬರ್ಡ್ಸ್​’ ಸಿನಿಮಾ ತಂಡದೊಳಗಿನ ಕಿರಿಕ್​ ಬಹಿರಂಗ ಆಗಿದೆ. ನಿರ್ದೇಶಕ ಪಿಸಿ ಶೇಖರ್​ (PC Shekar) ಅವರು ತಮಗೆ ನಿರ್ಮಾಪಕರಿಂದ ಅನ್ಯಾಯ ಆಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಅವರು ಪೊಲೀಸ್​ ಠಾಣೆಯ ಮಟ್ಟಿಲೇರಿದ್ದಾರೆ. ‘ಲವ್​ ಬರ್ಡ್ಸ್​’ (Love Birds Movie) ಸಿನಿಮಾವನ್ನು ನಿರ್ಮಿಸಿದ್ದು ಕಡ್ಡಿಪುಡಿ ಚಂದ್ರು. ತಮ್ಮ ಮೇಲೆ ಕೇಳಿಬಂದ ಆರೋಪಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾತುಕಥೆ ಆಗಿದೆ ಎಂದು ಕಡ್ಡಿಪುಡಿ ಚಂದ್ರು (Kaddipudi Chandru) ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More