Free Petrol: ಜೆಡಿಎಸ್ ಸಮಾವೇಶಕ್ಕೆ ಬರುವ ಜನರ ಬೈಕ್​​ಗಳಿಗೆ ಫ್ರೀ ಪೆಟ್ರೋಲ್; ಮುಗಿಬಿದ್ದ ಜನರು

|

Updated on: Apr 10, 2023 | 2:59 PM

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಶಿನಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಸಮಾವೇಶ ಬರುವ ಜನರ ಬೈಕ್​​ಗಳಿಗೆ ಉಚಿತವಾಗಿ ಪೆಟ್ರೋಲ್ ನೀಡಲಾಗಿದೆ. ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸಮಾವೇಶ ಇದಾಗಿದೆ.

ಕೋಲಾರ: ಪಕ್ಷದ ಸಮಾವೇಶ, ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದರಂತೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಜೆಡಿಎಸ್ (JDS) ಅಭ್ಯರ್ಥಿ ಸಮೃದ್ಧಿ ಮಂಜುನಾಥ್ (Samruddhi Manjunath) ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಆಗಮಿಸುವ ಜನರ ಬೈಕ್​​ಗಳಿಗೆ ಉಚಿತ ಪೆಟ್ರೋಲ್ ವ್ಯವಕಸ್ಥೆ ಕಲ್ಪಿಸಲಾಗಿದೆ. ಶಿನಿಗೇನಹಳ್ಳಿ ಬಳಿ ಇರುವ ರೇಣಿಕಾಯಲ್ಲಮ್ಮ ನಯಾರ ಪೆಟ್ರೋಲ್ ಬಂಕ್​​ನಲ್ಲಿ ಪ್ರತಿ ಬೈಕ್​​ಗೆ 100 ರೂ. ಪೆಟ್ರೋಲ್​ ಅನ್ನು ಉಚಿತವಾಗಿ ಹಾಕುವ ಮೂಲಕ ಜನರನ್ನು ಸಮಾವೇಶಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Apr 10, 2023 02:57 PM