ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್; ಫಿಫಾ ವಿಶ್ವಕಪ್ ಸೆಮಿಫೈನಲ್ ನೋಡಲು ವಿಶೇಷ ಆದೇಶ
ಫುಟ್ಬಾಲ್ ಪ್ರೇಮಿಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫಿಫಾ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಿಸುವವರಿಗೆ ಅನುಕೂಲವಾಗುವಂತೆ ಹೋಟೆಲ್, ರೆಸ್ಟೋರೆಂಟ್‌ಗಳನ್ನು ತಡರಾತ್ರಿ 3:30ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಇಂದಿನಿಂದ ಜುಲೈ 19ರವರೆಗಿನ ಆಯ್ದ ದಿನಗಳಂದು ಈ ಅವಕಾಶ ಲಭ್ಯವಿರುತ್ತದೆ. ಈ ಬಗ್ಗೆ ಸರ್ಕಾರ ಮಹತ್ವದ ಆದೇಶವನ್ನು ನೀಡಿದೆ.
ಬೆಂಗಳೂರಿ, ಜು.14: ಕರ್ನಾಟಕ ರಾಜ್ಯ ಸರ್ಕಾರವು ಫುಟ್ಬಾಲ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಫಿಫಾ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಿಸುವವರ ಅನುಕೂಲಕ್ಕಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ತಡರಾತ್ರಿ 3:30ರವರೆಗೆ ತೆರೆಯಲು ಅನುಮತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಆದೇಶವು ಜಾರಿಯಲ್ಲಿರುತ್ತದೆ. ಈ ವಿಶೇಷ ಅನುಮತಿಯು ಪ್ರತಿದಿನ ಇರುವುದಿಲ್ಲ. ನಿರ್ದಿಷ್ಟವಾಗಿ ಇಂದು (ಮೊದಲ ಸೆಮಿಫೈನಲ್), ನಾಳೆ (ಎರಡನೇ ಸೆಮಿಫೈನಲ್) ಮತ್ತು ಜುಲೈ 19 ರಂದು (ಫೈನಲ್ ಪಂದ್ಯದ ದಿನ) ಮಾತ್ರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯರಾತ್ರಿಯಿಂದ ಬೆಳಗಿನ ಜಾವ 3:30ರ ತನಕ ತೆರೆದಿರಲಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಸಲ್ಲಿಸಿದ ಮನವಿಯ ಮೇರೆಗೆ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ರಾತ್ರಿ 12 ರಿಂದ 1 ಗಂಟೆಯ ವೇಳೆಗೆ ಮುಚ್ಚುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಈ ದಿನಗಳಲ್ಲಿ ವಿಶೇಷವಾಗಿ ಫುಟ್ಬಾಲ್ ಅಭಿಮಾನಿಗಳಿಗಾಗಿ ಹೆಚ್ಚುವರಿ ಸಮಯ ಕಾರ್ಯನಿರ್ವಹಿಸಲಿವೆ. ಇಂದಿನ ಫ್ರಾನ್ಸ್-ಸ್ಪೇನ್ ಸೆಮಿಫೈನಲ್, ನಾಳೆಯ ಅರ್ಜೆಂಟೈನಾ-ಇಂಗ್ಲೆಂಡ್ ಸೆಮಿಫೈನಲ್ ಮತ್ತು ಮುಂದಿನ ಫೈನಲ್ ಪಂದ್ಯಗಳಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಇದು ಫುಟ್ಬಾಲ್ ಪ್ರಿಯರಿಗೆ ಸಂತಸ ತಂದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
