ರಾಜ್ಯದ ಎಲ್ಲ ಜನರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
ಜವಾಬ್ದಾರಿ ಸ್ಥಾನಗಳಲ್ಲಿರುವ ಜನ ಮಾತಾಡುವಾಗ ಎಚ್ಚರ ತಪ್ಪಿದರೆ ಹೀಗೆಯೇ ಆಗೋದು. ಹರಿಪ್ರಸಾದ್ ಅವರಿಗೆ ನಿಜಕ್ಕೂ ಅಂಥ ಮಾಹಿತಿ ಇದ್ದರೆ ಹೀಗೆ ಮಾಧ್ಯಮಗಳಿಗೆ ಹೇಳುವ ಬದಲು ಸರ್ಕಾರದ ಗಮನಕ್ಕೆ ತರಬೇಕಿತ್ತು. ಸಾಮೂಹಿಕ ಹತ್ಯೆಗಳು ನಡೆದ ಮೇಲೆ ಸರಕಾರವನ್ನು ಎಚ್ಚರಿಸಲಾದೀತೇ? ಪ್ರಬುಧ್ದ ರಾಜಕಾರಣಿಯಾಗಿರುವ ಹರಿಪ್ರಸಾದ್ ಅವರಿಂದ ಕನ್ನಡಿಗ ಇಂಥ ಚೇಷ್ಟೆ ನಿರೀಕ್ಷಿಸಿರಲಿಲ್ಲ!
ಬೆಂಗಳೂರು: ಬಿಕೆ ಹರಿಪ್ರಸಾದ್ (BK Hariprasad) ಅವರ ಗೋಧ್ರಾ ಹತ್ಯಾಕಾಂಡದಂಥ ಘಟನೆ ಮರುಕಳಿಸುವ ಸಾಧ್ಯತೆಯ ಬಗ್ಗೆ ನೀಡಿದ ಹೇಳಿಕೆ ರಾಜ್ಯ ಸರ್ಕಾರ, ಸಚಿವರನ್ನು ಮತ್ತು ನಾಯಕರನ್ನು ಇಕ್ಕಟ್ಟಿಗೆ ಮತ್ತು ಪೇಚಿಗೆ ಸಿಲುಕಿಸಿದೆ. ಅವರು ನೀಡಿದ ಅಸಂಬದ್ಧ (absurd) ಹೇಳಿಕೆಗೆ ಸಚಿವರು ಸ್ಪಷ್ಟನೆಗಳನ್ನು ನೀಡುವ ಅನಿವಾರ್ಯತೆ ಉಂಟಾಗಿದೆ. ಇಂದು ನಗರದದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೊಂಚ ಬಿಡುವು ಮಾಡಿಕೊಂಡು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಹರಿಪ್ರಸಾದ್ ಹೇಳಿಕೆ ಮತ್ತು ಸರ್ಕಾರದ ನಡುವೆ ಸಂಬಂಧವಿಲ್ಲ ಅವರು ಯಾವ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ, ಆದರೆ ತಮ್ಮ ಸರ್ಕಾರ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಲ್ಲ, ರಾಜ್ಯದ ಎಲ್ಲ ಜನರಿಗೆ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ರಾಜ್ಯಕ್ಕೆ ಅಪಖ್ಯಾತಿ ತರುವ ಯಾವುದೇ ಘಟನೆ ಜರುಗದಂತೆ ಸರ್ಕಾರ ಎಚ್ಚರವಹಿಸಲಿದೆ ಮತ್ತು ಯಾವುದೇ ಕುತಂತ್ರ ನಡೆಯಲು ಬಿಡಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ