ಒಡಿಶಾ ರೈಲು ದುರಂತ: ಹೌರಾದಲ್ಲಿ ಸಿಲುಕಿ ಪರದಾಡಿದ ಪರಿಸ್ಥಿತಿ ವಿವರಿಸಿದ ಕರ್ನಾಟಕದ ವಿದ್ಯಾರ್ಥಿನಿ

|

Updated on: Jun 04, 2023 | 10:57 AM

ಕೋಲ್ಕತ್ತಾದ ಹೌರಾ ರೈಲು ನಿಲ್ದಾಣದಲ್ಲಿ ಪರದಾಡುತ್ತಿದ್ದ ವಾಲಿಬಾಲ್ ಕ್ರೀಡಾಪಟುಗಳನ್ನ ಕರ್ನಾಟಕ ಸರ್ಕಾರ ವಿಮಾನದ ಮೂಲಕ ರಾಜ್ಯಕ್ಕೆ ಕರೆತಂದಿದೆ. ಹೌದು ನ್ಯಾಷನಲ್ ವಾಲಿಬಾಲ್ ಚಾಂಪಿಯನ್ ಷಿಪ್ ಸಲುವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ 16 ವರ್ಷ ಒಳಗಿನ ಬಾಲಕ ಹಾಗೂ ಬಾಲಕಿಯರ ತಂಡದ 23 ಆಟಗಾರರು ಕೋಚ್ ಗಳು ಇಂಡಿಗೋ ವಿಮಾನದ ಮೂಲಕ ಕೇಂಪೇಗೌಡ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದರು.ಈ ವೇಳೆ ಕ್ರೀಡಾಪಟುಗಳು ಅಲ್ಲಿ ಎದುರಿಸಿದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು: ಒಡಿಶಾ ರೈಲು ದುರಂತ ಪ್ರಕರಣದಿಂದ ರಾಜ್ಯಕ್ಕೆ ಬರಲು ಪರದಾಡಿದ್ದ ವಾಲಿಬಾಲ್ ಕ್ರೀಡಾಪಟುಗಳು ಕೊನೆಗೂ ಸೇಫ್ ಆಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಒಡಿಶಾ ರೈಲು ದುರಂತ ಪ್ರಕರಣದ ಪರಿಣಾಮದ ಹಿನ್ನೆಲೆಯಿಂದ ಪಶ್ಚಿಮ ಬಂಗಾಳ ಒಡಿಶಾ ಕರ್ನಾಟಕ ರೈಲು ಮಾರ್ಗ ಸಂಚಾರ ಬಂದ್ ಆಗಿದೆ. ಹೀಗಾಗಿ ಪಶ್ಚಿಮ ಬಂಗಾಳದ ಹೌರಾದಿಂದ ಬೆಂಗಳೂರಿಗೆ ಬರಲು ರೈಲು ಸಿಗದೆ ಪರದಾಡಿದ್ದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸಹಾಯ ಹಸ್ತ ಚಾಚಿದೆ. ರೈಲು ಇಲ್ಲದೆ ಕ್ರೀಡಾಪಟುಗಳು ಪರದಾಡ್ತಿದ್ದ ಬಗ್ಗೆ ಟಿವಿನೈನ್ ವಿಸ್ಕ್ರತ ವರದಿ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಮಾನದ ಮೂಲಕ ಕ್ರೀಡಾಪಟುಗಳನ್ನ ಕರ್ನಾಟಕಕ್ಕೆ ಕರೆತಂದಿದೆ. ಅಂದಹಾಗೆ ಒಡಿಶಾ ರೈಲು ದುರಂತ ಪ್ರಕರಣದ ಪರಿಣಾಮದಿಂದ ಬೆಂಗಳೂರಿಗೆ ಆಗಮಿಸಲು ರೈಲು ಇಲ್ಲದೆ ಕೋಲ್ಕತ್ತಾದ ಹೌರಾ ರೈಲು ನಿಲ್ದಾಣದಲ್ಲಿ ಪರದಾಡುತ್ತಿದ್ದ ವಾಲಿಬಾಲ್ ಕ್ರೀಡಾಪಟುಗಳನ್ನ ಕರ್ನಾಟಕ ಸರ್ಕಾರ ವಿಮಾನದ ಮೂಲಕ ರಾಜ್ಯಕ್ಕೆ ಕರೆತಂದಿದೆ. ಹೌದು ನ್ಯಾಷನಲ್ ವಾಲಿಬಾಲ್ ಚಾಂಪಿಯನ್ ಷಿಪ್ ಸಲುವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ 16 ವರ್ಷ ಒಳಗಿನ ಬಾಲಕ ಹಾಗೂ ಬಾಲಕಿಯರ ತಂಡದ 23 ಆಟಗಾರರು ಕೋಚ್ ಗಳು ಇಂಡಿಗೋ ವಿಮಾನದ ಮೂಲಕ ಕೇಂಪೇಗೌಡ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದರು.ಈ ವೇಳೆ ಕ್ರೀಡಾಪಟುಗಳು ಅಲ್ಲಿ ಎದುರಿಸಿದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

Follow us on