ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು: 2.20 ಲಕ್ಷ ಕುಟುಂಬಗಳಿಗೆ ಸಿಕ್ಕಿತು ಅಧಿಕೃತ ಮನೆ ಹಕ್ಕು!

Updated on: May 12, 2026 | 9:22 PM

ಕರ್ನಾಟಕ ಸರ್ಕಾರವು ಹಾಡಿ, ಹಟ್ಟಿ, ತಾಂಡಾ, ಕ್ಯಾಂಪ್‌ಗಳಂತಹ ಅನಧಿಕೃತ ವಸತಿ ಪ್ರದೇಶಗಳಿಗೆ ಅಧಿಕೃತ ಮಾನ್ಯತೆ ನೀಡುವ ಮೂಲಕ ಮೂಲಭೂತ ಸೌಕರ್ಯ ವಂಚಿತರಿಗೆ ಹಕ್ಕುಪತ್ರ ವಿತರಿಸುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 1.06 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಪ್ರಸ್ತುತ ಸರ್ಕಾರವು ಎರಡುವರೆ ವರ್ಷಗಳಲ್ಲಿ 2.20 ಲಕ್ಷ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಿದೆ. ಜನಗಣತಿ ಕಾರಣದಿಂದ ತಾತ್ಕಾಲಿಕ ವಿಳಂಬವಾಗಿದ್ದು, ಇನ್ನೂ 2 ಲಕ್ಷ ಹಕ್ಕುಪತ್ರಗಳನ್ನು ನೀಡಲು ಸಿದ್ಧತೆ ನಡೆದಿದೆ.

ಬೆಂಗಳೂರು, ಮೇ.12: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ದಶಕಗಳಿಂದಲೂ ದಾಖಲೆರಹಿತ ವಸತಿ ಪ್ರದೇಶಗಳಾಗಿರುವ ಹಾಡಿ, ಹಟ್ಟಿ, ತಾಂಡಾ ಮತ್ತು ಕ್ಯಾಂಪ್‌ಗಳಿಗೆ ಅಧಿಕೃತ ಮಾನ್ಯತೆ ನೀಡುವ ಕಾರ್ಯಕ್ರಮವನ್ನು ಆದ್ಯತೆಯಾಗಿ ಕೈಗೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಭೂ ದಾಖಲೆಗಳಿಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆಶ್ರಯ ಯೋಜನೆ, ಬ್ಯಾಂಕ್ ಸಾಲ, ಇ-ಸ್ವತ್ತು, ಮತ್ತು ಆಸ್ತಿ ಪರಬಾರೆ ಮಾಡುವಂತಹ ಹಕ್ಕುಗಳನ್ನು ಹೊಂದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರವು ಕಾನೂನು ತಿದ್ದುಪಡಿ ಮಾಡಿ ಆರು ವರ್ಷಗಳಲ್ಲಿ (2017-2023) 1.06 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿತ್ತು. ಆದರೆ, ಪ್ರಸ್ತುತ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಇದನ್ನು ಒಂದು ಪ್ರಮುಖ ಯೋಜನೆಯಾಗಿ ಪರಿಗಣಿಸಿ, ಕೇವಲ ಎರಡುವರೆ ವರ್ಷಗಳಲ್ಲಿ 2.20 ಲಕ್ಷ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದೆ. ಕೇಂದ್ರ ಸರ್ಕಾರದ ಜನಗಣತಿ ನಿರ್ದೇಶನದಿಂದಾಗಿ ಹೊಸ ಕಂದಾಯ ಗ್ರಾಮ ಸೃಜನೆಗೆ ತಾತ್ಕಾಲಿಕ ನಿರ್ಬಂಧವಿರುವುದರಿಂದ ಇನ್ನೂ 2 ಲಕ್ಷ ಹಕ್ಕುಪತ್ರಗಳ ವಿತರಣೆ ವಿಳಂಬವಾಗಿದೆ. ಜನಗಣತಿ ಮುಗಿದ ನಂತರ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us