ಉತ್ತರ ಕನ್ನಡ: ಇದ್ದಕ್ಕಿದ್ದಂತೆ ಮಾಯವಾದ R15 ಬೈಕ್; ಭೂತದ ಕೈವಾಡವೋ? ಕಳ್ಳರ ಕೈಚಳಕವೋ ತಿಳಿಯದಾದ ಘಟನೆ

| Updated By: Rakesh Nayak Manchi

Updated on: Dec 08, 2022 | 11:52 AM

ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್‌ನಲ್ಲಿ ಇದ್ದಕ್ಕಿದ್ದಂತೆ ಬೈಕ್​ವೊಂದು ಮಾಯವಾದ ಅಚ್ಚರಿಯ ಘಟನೆ ನಡೆದಿದೆ. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕಾರವಾರ: ಪಾರ್ಕ್ ಮಾಡಿದ್ದ ಬೈಕ್ ಇದ್ದಕ್ಕಿದ್ದಂತೆ ಮಾಯವಾದ (Bike disappeared) ಅಚ್ಚರಿಯ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಟಿಬೇಟಿ ಕ್ಯಾಂಪ್ (Tibetan camp) ನಂ.1 ಬಳಿ ನಡೆದಿದೆ. ಕ್ಯಾಂಪ್ ಪಕ್ಕದ ಗ್ಯಾರೇಜ್ ಬಳಿ ನಿಂತಿದ್ದ ಯಮಹಾ R15 ಬೈಕ್ ಇದ್ದಕ್ಕಿದ್ದಂತೆ ಮಾಯವಾದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಕ್ಷಣ ನಿಬ್ಬೆರಗಾಗುವ ಘಟನೆಯ ಹಿಂದೆ ಭೂತದ ಕೈವಾಡವೋ ಅಥವಾ ಕಳ್ಳರ ಕೈಚಳಕವೋ ತಿಳಿಯದಾಗಿದೆ. ಡಿಸೆಂಬರ್ 6 ರಂದು ಮಧ್ಯ ರಾತ್ರಿ 11.57 ರಿಂದ 12 ಗಂಟೆ ಒಳಗಡೆ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಲಕ್ಷ್ಮಣ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ರಿಪೇರಿ ಹಿನ್ನೆಲೆ ಬೈಕ್ ಅನ್ನು ಗ್ಯಾರೇಜ್​ಗೆ ತಂದಿಟ್ಟಿದ್ದರು. ಬೈಕ್ ಕಳ್ಳತನವಾಗಿದೆ ಎಂದು ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಬೈಕ್ ಮಾಯವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 08, 2022 11:52 AM