ಗಿಲ್ಲಿ ಚುಚ್ಚು ಮಾತುಗಳನ್ನು ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಸಾಕಷ್ಟು ಗೆಳೆತನ ಇದೆ. ಆದರೆ, ಈ ಗೆಳೆತನ ಬ್ರೇಕ್ ಆಗುವ ಹಂತಕ್ಕೆ ಹೋಗಿದೆ. ಈಗ ಗಿಲ್ಲಿ ಅವರು ಕಾವ್ಯಾನ ಚುಚ್ಚು ಮಾತುಳಿಂದ ಅಳಿಸಿದ್ದಾರೆ. ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಅವರು ಕಣ್ಣೀರು ಹಾಕಿದ್ದಾರೆ. ಅಂದಹಾಗೆ ಇದು ಸೀಕ್ರೆಟ್ ಟಾಸ್ಕ್. ಈ ಟಾಸ್ಕ್ನ ಯಶಸ್ವಿಯಾಗಿ ಗಿಲ್ಲಿ ಪೂರೈಸಿದ್ದಾರೆ.
ಗಿಲ್ಲಿ ಹಾಗೂ ಕಾವ್ಯಾ ಬೆಸ್ಟ್ ಫ್ರೆಂಡ್ಸ್. ಯಾವುದೇ ಕಾರಣಕ್ಕೂ ಗಿಲ್ಲಿ ಅವರು ಕಾವ್ಯಾನ ಬಿಟ್ಟುಕೊಟ್ಟಿಲ್ಲ. ಆದರೆ, ಈಗ ಕಾವ್ಯಾ ತಮ್ಮನ್ನು ನಾಮಿನೇಷನ್ ಮಾಡಿದ ವಿಷಯವನ್ನು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಒಂದೇ ಸಮನೇ ಚುಚ್ಚುಮಾತುಗಳಿಂದ ಕಾವ್ಯಾ ಅವರನ್ನು ತಿವಿದಿದ್ದಾರೆ. ಇದರಿಂದ ಕಾವ್ಯಾ ಕಣ್ಣೀರು ಹಾಕಿದ್ದಾರೆ. ಗಿಲ್ಲಿ ಈ ರೀತಿ ಆಡೋಕೆ ಕಾರಣ ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್. ಕಾವ್ಯಾನ ಅಳಿಸಿದರೆ ಕ್ಯಾಪ್ಟನ್ಸಿ ರೇಸ್ಗೆ ನೀವು ಆಯ್ಕೆ ಆಗೋದಾಗಿ ವಿಲನ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
