‘ವೀರ ಕನ್ನಡಿಗ’ ಶೂಟಿಂಗ್ ಸಮಯದಲ್ಲಿ ನಡೆದ ದುರ್ಘಟನೆ ನೆನಪು ಮಾಡಿಕೊಂಡ ‘ಕೆರೆಬೇಟೆ’ ನಾಯಕ
Kere Bete: ಪುನೀತ್ ರಾಜ್ಕುಮಾರ್ ನಟನೆಯ ‘ವೀರ ಕನ್ನಡಿಗ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದ ಅವಘಡವನ್ನು ‘ಕೆರೆ ಬೇಟೆ’ ಸಿನಿಮಾದ ನಾಯಕ ಗೌರಿಶಂಕರ್ ನೆನಪು ಮಾಡಿಕೊಂಡರು. 20 ವರ್ಷದ ಹಿಂದೆ ನಡೆದ ಘಟನೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಈಗಲೂ ನೆನಪಿಟ್ಟುಕೊಂಡಿದ್ದಾರೆ ಎಂದರು.
‘ಕೆರೆಬೇಟೆ’ (KereBete) ಸಿನಿಮಾ ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ಸಖತ್ ಗಮನ ಸೆಳೆಯುತ್ತಿದೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು ಪ್ರಚಾರ ಕಾರ್ಯ ಶುರುವಾಗಿದೆ. ‘ಕೆರೆಬೇಟೆ’ ಸಿನಿಮಾದ ಹಾಡನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ‘ಕೆರೆಬೇಟೆ’ ಸಿನಿಮಾದ ನಾಯಕ ಗೌರಿಶಂಕರ್, ಪುನೀತ್ ರಾಜ್ಕುಮಾರ್ ನಟಿಸಿದ್ದ ‘ವೀರಕನ್ನಡಿಗ’ ಸಿನಿಮಾ ಚಿತ್ರೀಕರಣದಲ್ಲಿ ನಡೆದ ಅವಘಡ ನೆನಪು ಮಾಡಿಕೊಂಡಿದ್ದಾರೆ. ಪಟಾಕಿ ಬ್ಲಾಸ್ಟ್ನಲ್ಲಿ ತಮಗೆ ಗಾಯವಾದಾಗ ಅಪ್ಪು ಹಾಗೂ ಇಡೀ ಚಿತ್ರತಂಡ ತಮ್ಮನ್ನು ಹೇಗೆ ನೋಡಿಕೊಂಡಿತು ಎಂಬುದನ್ನು ನೆನಪಿಸಿಕೊಂಡರು. ಆ ಘಟನೆ ನಡೆದು 20 ವರ್ಷವಾಯ್ತು. ಆದರೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಇಂದಿಗೂ ಆ ಘಟನೆಯನ್ನು, ನನ್ನನ್ನು ನೆನಪಿಟ್ಟುಕೊಂಡಿದ್ದರು. ಬ್ಯುಸಿ ಕೆಲಸದ ಮಧ್ಯೆಯೂ ಬಂದು ನಮ್ಮ ಸಿನಿಮಾಕ್ಕೆ ಶುಭ ಹಾರೈಸಿದ್ದು ನಮಗೆ ಇನ್ನಷ್ಟು ಶಕ್ತಿ ತುಂಬಿದೆ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ