Video: ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ

Updated on: Apr 03, 2026 | 7:41 AM

ಇಸ್ರೇಲ್-ಅಮೆರಿಕವು ಇರಾನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್​ನ ಅಲ್ಬೋರ್ಜ್​ ಪ್ರಾಂತ್ಯದಲ್ಲಿ ಅಮೆಡರಿಕ-ಇಸ್ರೇಲಿ ಕ್ಷಿಪಣಿ ದಾಳಿಯಿಂದಾಗಿ ಕರಾಜ್​ನಲ್ಲಿರುವ ಬಿ1 ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ದಾಳಿಯಿಂದ ಗಣನೀಯ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಯುದ್ಧ ಸ್ಥಿತಿ ಬಗ್ಗೆ ಮಾತನಾಡಿದ್ದರು.

ಟೆಹ್ರಾನ್, ಏಪ್ರಿಲ್ 3: ಇಸ್ರೇಲ್-ಅಮೆರಿಕವು ಇರಾನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್​ನ ಅಲ್ಬೋರ್ಜ್​ ಪ್ರಾಂತ್ಯದಲ್ಲಿ ಅಮೆಡರಿಕ-ಇಸ್ರೇಲಿ ಕ್ಷಿಪಣಿ ದಾಳಿಯಿಂದಾಗಿ ಕರಾಜ್​ನಲ್ಲಿರುವ ಬಿ1 ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ದಾಳಿಯಿಂದ ಗಣನೀಯ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಯುದ್ಧ ಸ್ಥಿತಿ ಬಗ್ಗೆ ಮಾತನಾಡಿದ್ದರು.

ಇರಾನ್ ಮೇಲಿನ ದಾಳಿ ಮುಂದುವರೆಸುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಹಾರ್ಮುಜ್ ಜಲಸಂಧಿಯಿಂದ ತಮಗೇನು ಉಪಯೋಗವಿಲ್ಲ, ನಮ್ಮ ಹಡಗುಗಳೇನು ಅಲ್ಲಿಂದ ಬರುವುದಿಲ್ಲ, ನಮ್ಮಲ್ಲೇ ಬೇಕಾದಷ್ಟು ತೈಲ ಇದೆ, ನೀವೇ ಬೇಕಿದ್ದರೆ ನಮ್ಮಿಂದ ತೈಲ ಖರೀದಿಸಿ ಎಂದು ಬೇರೆ ದೇಶಗಳಿಗೆ ಸಲಹೆ ನೀಡಿದ್ದರು. ಇದಾದ ಬಳಿಕ ಅಮೆರಿಕ-ಇಸ್ರೇಲ್ ಜಂಟಿಯಾಗಿ ತಮ್ಮ ದಾಳಿಯನ್ನು ಮುಂದುವರೆಸಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More