Karnataka Assembly Polls: ಹಿರೇಕೆರೂರಲ್ಲಿ ಸಚಿವ ಬಿಸಿ ಪಾಟೀಲ ಪರ ಕಿಚ್ಚ ಸುದೀಪ್ ಅಬ್ಬರದ ಪ್ರಚಾರ, ರೋಡ್ ಶೋ!

Updated on: Apr 27, 2023 | 2:56 PM

ಉರಿಬಿಸಿಲು ಲೆಕ್ಕಿಸದೆ ಜನ ತಮ್ಮ ಮೆಚ್ಚಿನ ನಟನನ್ನು ನೋಡಲು ಸೇರಿದ್ದರು. ರೋಡ್ ಶೋನಲ್ಲಿ ಮದಕರಿ ನಾಯಕ ಅಂತ ಬರೆದಿದ್ದ ಬ್ಯಾನರ್ ಗಳೇ ಜಾಸ್ತಿಕಂಡವು.

ಹಾವೇರಿ: ಜಿಲ್ಲೆಯ ಹಿರೇಕೆರೂರ್ ವಿಧಾನಸಭಾ ಕ್ಷೇತ್ರದಲ್ಲಿ (Hirekerur constituency) ಸಚಿವ ಬಿಸಿ ಪಾಟೀಲ್ (BC Patil) ಪರ ಇಂದು ಚಿತ್ರ ನಟ ಕಿಚ್ಚ ಸುದೀಪ್ (Kiccha Sudeep) ರೋಡ್ ಶೋ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದರು. ಹಿಂದೆ ಬಿಸಿ ಪಾಟೀಲ್ ಕೂಡ ಚಿತ್ರನಟರಾಗಿದ್ದರಿಂದ ಸುದೀಪ್ ರೊಂದಿಗೆ ಅವರ ಕೆಮಿಸ್ಟ್ರಿ ಚೆನ್ನಾಗಿರುತ್ತದೆ. ಕಿಚ್ಚ ಹೋದೆಡೆಯೆಲ್ಲ ಜನ ಪ್ರವಾಹ ಹರಿದು ಬರುತ್ತಿದೆ. ಹಿರೇಕೆರೂರ್ ನಲ್ಲಿ ನೆರೆದಿರುವ ಜನ ಸಮೂಹ ನೋಡಿ. ಉರಿಬಿಸಿಲು ಲೆಕ್ಕಿಸದೆ ಜನ ತಮ್ಮ ಮೆಚ್ಚಿನ ನಟನನ್ನು ನೋಡಲು ಸೇರಿದ್ದರು. ರೋಡ್ ಶೋನಲ್ಲಿ ಮದಕರಿ ನಾಯಕ ಅಂತ ಬರೆದಿದ್ದ ಬ್ಯಾನರ್ ಗಳೇ ಜಾಸ್ತಿಕಂಡವು. ಮಿಲಿಯನ್ ಡಾಲರ್ ಪ್ರಶ್ನೆಯೇನೆಂದರೆ, ಮತದಾರರಿಗೆ ಕಿಚ್ಚನ ಬಗ್ಗೆ ಇರುವ ಪ್ರೀತಿ, ಅಭಿಮಾನ ಬಿಸಿ ಪಾಟೀಲ್ ಅವರಿಗೆ ವೋಟುಗಳಲ್ಲಿ ಪರಿವರ್ತನೆಯಾಗಬಹುದೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More