‘ಮತ್ತೆ ಮೊದಲಿನ ಆಟ ಶುರುವಾಗಲಿದೆ’; ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್

Updated on: Dec 30, 2023 | 2:39 PM

ಸ್ಪರ್ಧಿಗಳು ಕುಟುಂಬದವರ ಜೊತೆ ಮಾತನಾಡಿ ಹಾಯಾಗಿ ಸಮಯ ಕಳೆದಿದ್ದರು. ಸ್ಪರ್ಧಿಗಳು ಇನ್ನೂ ಇದೇ ಹ್ಯಾಂಗೋವರ್​ನಲ್ಲಿ ಇದ್ದಾರೆ. ಇದರಿಂದ ಹೊರ ಬರುವಂತೆ ಸುದೀಪ್ ಪರೋಕ್ಷವಾಗಿ ಸೂಚಿಸಿದ್ದಾರೆ.

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳು ಈ ವಾರ ಚಿಲ್ ಆಗಿದ್ದರು. ಕುಟುಂಬದವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಹೀಗಾಗಿ ಸ್ಪರ್ಧಿಗಳು ಅವರ ಜೊತೆ ಮಾತನಾಡಿ ಹಾಯಾಗಿ ಸಮಯ ಕಳೆದಿದ್ದರು. ಸ್ಪರ್ಧಿಗಳು ಇನ್ನೂ ಇದೇ ಹ್ಯಾಂಗೋವರ್​ನಲ್ಲಿ ಇದ್ದಾರೆ. ಇದರಿಂದ ಹೊರ ಬರುವಂತೆ ಸುದೀಪ್ (Sudeep) ಪರೋಕ್ಷವಾಗಿ ಸೂಚಿಸಿದ್ದಾರೆ. ಎಲ್ಲರಿಗೂ ಬಂದ ತಕ್ಷಣ ಕಾಫಿ ಕಪ್ ಸಿಕ್ಕಿದೆ. ಇದರ ಅರ್ಥ ಏನು ಎಂಬುದನ್ನು ಸುದೀಪ್ ವಿವರಿಸಿದ್ದಾರೆ. ‘ಮನೆಯವರು ಬಂದರು ಹೋದರು. ನಾವು ಮೊದಲಿನ ರೀತಿ ಮಾತು ಆರಂಭಿಸೋಣ’ ಎಂದು ಸುದೀಪ್ ಹೇಳಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಸಂಚಿಕೆ ಇಂದು (ಡಿಸೆಂಬರ್ 30) ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More