ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್

Updated on: Dec 20, 2025 | 8:53 AM

ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್ ನಡೆಸಿಕೊಡಲು ಬಂದಿದ್ದಾರೆ. ಈ ಎಪಿಸೋಡ್ ಸಖತ್ ಫನ್ ಆಗಿ ತೆಗೆದುಕೊಂಡು ಹೋಗಲಾಗಿದೆ. ಸಾಮಾನ್ಯವಾಗಿ ಶನಿವಾರದ ಎಪೊಸೋಡ್​ನ ಗಂಭೀರವಾಗಿ ನಡೆಸುತ್ತಾರೆ ಸುದೀಪ್. ಆದರೆ, ಕಿಚ್ಚ ಇದನ್ನು ಬದಲಾಯಿಸಿದ್ದಾರೆ. ರಕ್ಷಿತಾ ಹಾಗೂ ಧ್ರುವಂತ್ ಜೊತೆ ಅವರು ಮಾತನಾಡಿದ್ದಾರೆ.

ಸುದೀಪ್ ಅವರು ಪ್ರತಿ ಶನಿವಾರದ ಎಪಿಸೋಡ್​ನ ಗಂಭೀರವಾಗಿ ನಡೆಸಿಕೊಡುತ್ತಾರೆ. ಆದರೆ, ಈ ವಾರ ಅವರು ಫನ್ ಮೂಡ್​ನಲ್ಲಿ ಇದ್ದಂತೆ ಕಾಣಿಸಿದೆ. ರಕ್ಷಿತಾ ಅವರು ಸೀಕ್ರೇಟ್ ರೂಂ ಅನುಭವ ಬಿಚ್ಚಿಟ್ಟರು.ಧ್ರುವಂತ್ ಸಹವಾಸ ಮಾಡಿ ನನಗೆ ತಲೆ ನೋವು ಬರುತ್ತಿದೆ ಎಂದರು ರಕ್ಷಿತಾ. ಆದರೆ, ನಮಗೆ ಎಲ್ಲಾ ಕಡೆಗಳಲ್ಲೂ ನೋವಾಗುತ್ತಿದೆ ಎಂದರು ಸುದೀಪ್. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋನ ಹಂಚಿಕೊಂಡಿದೆ. ಆ ಸಂದರ್ಭದ ಫನ್ ವಿಟಿ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More