Daily Devotional: ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ 18 ಮೆಟ್ಟಿಲುಗಳು ಇದ್ದು, ಈ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ 18 ಮೆಟ್ಟಿಲುಗಳ ಅರ್ಥವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಕೇರಳದ ಪುಣ್ಯ ಕ್ಷೇತ್ರಗಳಲ್ಲೊಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನ. ಮಕರ ಸಂಕ್ರಮಣದ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಲಕ್ಷಾಂತರ ಭಕ್ತರು ತೆರಳುತ್ತಾರೆ. ಮಕರ ಸಂಕ್ರಮಣದ ಸಮಯದಲ್ಲಿ ಆಗಸದಲ್ಲಿ ಕಾಣುವ ಅಯ್ಯಪ್ಪ ಸ್ವಾಮಿಯ ಸ್ವರೂಪವಾದ ಜ್ಯೋತಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಶಬರಿಮಲೆಗೆ ಹೋಗುವವರು 41 ದಿನಗಳ ಕಾಲ ಕಠಿಣ ವ್ರತವನ್ನು ಪಾಲಿಸಬೇಕು. ಈ 41 ದಿನಗಳ ಕಾಲ ಸಾತ್ವಿಕ ಆಹಾರವನ್ನು ಸೇವಿಸಿ, ಬ್ರಹ್ಮಚರ್ಯ ಪಾಲಿಸುತ್ತಾರೆ. ಕೊನೆಗೆ ಮಕರ ಸಂಕ್ರಮಣ ದಿನ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಾರೆ. ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 18 ಮೆಟ್ಟಿಲುಗಳು ಇದ್ದು, ಈ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ 18 ಮೆಟ್ಟಿಲುಗಳ ಅರ್ಥವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.