CLP Meeting, Bengaluru: ಸಭೆಗೆ ತಡವಾಗಿ ಬಂದ ಡಿಕೆ ಶಿವಕುಮಾರ್ ಪತ್ರಕರ್ತರಿಗೆ ರಾಜೇಶ್ ಖನ್ನಾ ಶೈಲಿಯಲ್ಲಿ ಸಲ್ಯೂಟ್ ಮಾಡಿ ಒಳಗೋಡಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2023 | 7:14 PM

ಸಚಿವ ಸಂಪುಟದ ಇತರ ಸದಸ್ಯರು ಮತ್ತು ಬೇರೆ ಬೇರೆ ಕ್ಷೇತ್ರಗಳ ಶಾಸಕರು ಒಳಗಡೆ ಹೋಗಿಬಿಟ್ಟಿದ್ದರು ಮತ್ತು ಸಭೆ ಅರಂಭವೂ ಆಗಿತ್ತು ಕೇವಲ ಶಿವಕುಮಾರ್ ಮಾತ್ರ ಹೊರಗುಳಿದಿದ್ದರು,

ಬೆಂಗಳೂರು: ತಡವಾಗಿ ಬಂದವರು ಓಡೋಡಿ ಬಂದರು! ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ವಿಧಾನ ಸೌಧದಲ್ಲಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ (CLP meeting) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅದ್ಯಾವುದೋ ಕಾರಣಕ್ಕೆ ವಿಧಾನ ಸೌಧ ತಲುಪುವುದು ತಡವಾಯಿತು. ಸಚಿವ ಸಂಪುಟದ ಇತರ ಸದಸ್ಯರು ಮತ್ತು ಬೇರೆ ಬೇರೆ ಕ್ಷೇತ್ರಗಳ ಶಾಸಕರು ಒಳಗಡೆ ಹೋಗಿಬಿಟ್ಟಿದ್ದರು ಮತ್ತು ಸಭೆ ಅರಂಭವೂ ಆಗಿತ್ತು. ಶಿವಕುಮಾರ್ ಅವಸರಲ್ಲಿ ನಡೆಯುತ್ತಾ ಒಳಗೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿ ನಿಂತಿದ್ದ ಮಾಧ್ಯಮದವರು ಬೈಟ್ ಗಾಗಿ ಸರ್ ಸರ್ ಅಂತ ಕೂಗುತ್ತಿದ್ದರೂ ಶಿವಕುಮಾರ್ ಮುಗುಳ್ನಗುತ್ತಾ 70ರ ದಶಕದ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಶೈಲಿಯಲ್ಲಿ ಅವರಿಗೊಂದು ಸೆಲ್ಯೂಟ್ ಮಾಡಿ, ಈಗಾಗಲೇ ತಡವಾಗಿದೆ ಎಂಬಂತೆ ಬೆಂಗಳೂರಿನ ಮೋಡ ಕವಿದ ವಾತಾವರಣದಲ್ಲಿ ಕಾಣದ ಸೂರ್ಯನೆಡೆ ಕೈ ತೋರುತ್ತಾ ಸೌಧದ ಒಳಗಡೆ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.