ಮನೆಯ ಛಾವಣಿಯ ಮೇಲೆ ಚಿರತೆ, ಕರಡಿ ಓಡಾಟ, ಇಲ್ಲಿದೆ ಭಯಾನಕ ವಿಡಿಯೋ
ಊಟಿಯ ಯಲ್ಲನಳ್ಳಿ ಕೈಕಟ್ಟಿ ಗ್ರಾಮದ ಮನೆಯೊಂದರ ಛಾವಣಿಯ ಮೇಲೆ ಚಿರತೆ ಓಡಾಟ ನಡೆಸಿದೆ. ಚಿರತೆ ಹೋದ ಸ್ವಲ್ಪ ಹೊತ್ತಿನ ನಂತರ ಅದೇ ಮನೆಯ ಛಾವಣಿಯ ಮೇಲೆ ಕರಡಿ ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವನ್ಯಜೀವಿಗಳು ಹಾಗೂ ಇಂತಹ ಅಪಾಯಕಾರಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಯಲ್ಲನಳ್ಳಿ, ಎ.06: ತಮಿಳುನಾಡಿನ ಊಟಿಯ ಜನವಸತಿ ಪ್ರದೇಶಗಳಲ್ಲಿ ಚಿರತೆ ಮತ್ತು ಕರಡಿ ರಾತ್ರಿ ಹೊತ್ತು ಮನೆಯ ಛಾವಣಿ ಮೇಲೆ ಓಡಾಟ ನಡೆಸುತ್ತಿದೆ. ಈ ಘಟನೆಯ ಬಗ್ಗೆ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ . ಊಟಿಯ ಯಲ್ಲನಳ್ಳಿ ಕೈಕಟ್ಟಿ ಗ್ರಾಮದ ಮನೆಯೊಂದರ ಛಾವಣಿಯ ಮೇಲೆ ಚಿರತೆ ಓಡಾಟ ನಡೆಸಿದೆ. ಚಿರತೆ ಹೋದ ಸ್ವಲ್ಪ ಹೊತ್ತಿನ ನಂತರ ಅದೇ ಮನೆಯ ಛಾವಣಿಯ ಮೇಲೆ ಕರಡಿ ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವನ್ಯಜೀವಿಗಳು ಹಾಗೂ ಇಂತಹ ಅಪಾಯಕಾರಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಇಂತಹ ಘಟನೆ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.
Loading...
Unable to load recommendations.
Follow Us