ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ಮಿಂಚಿದ ಜೂನಿಯರ್ ಮೋದಿ, ಏನಂದ್ರು ಗೊತ್ತಾ?

Edited By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 2:45 PM

ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್​ ಈಶ್ವರಪ್ಪ(K.S. Eshwarappa) ಅವರು ಇಂದು(ಏ.12) ಬೃಹತ್​ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೋದಿ ರೀತಿಯಲ್ಲಿ ಕಾಣುವ ಸದಾನಂದ್​ ನಾಯ್ಕ ಅವರು ಭಾಗಿಯಾಗಿ ಮಾತನಾಡಿ, ‘ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ನಾನು ಭಾಗಿ ಆಗಿದ್ದೆ. ಇದರಿಂದ ನನಗೆ ತುಂಬಾ ಖುಷಿ ಆಯ್ತು. ಮೋದಿ ಪ್ರೀತಿ ಮಾಡುವ ಜನರು ಎಲ್ಲರೂ ಒಂದಾಗಬೇಕು. ಮೆರವಣಿಗೆಯಲ್ಲಿ ನನ್ನ ನೋಡಿದ ಜನರು ತುಂಬಾ ಸಂತಸ ಪಟ್ಟಿದ್ದಾರೆ ಎಂದರು.

ಶಿವಮೊಗ್ಗ, ಏ.12: ಈ ಬಾರಿ ಶಿವಮೊಗ್ಗ ಲೋಕಸಭಾ ಕಣ ಮತ್ತಷ್ಟು ರಂಗೇರಿದ್ದು, ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಕಣಕ್ಕಿಳಿದಿರುವ ಹಿರಿಯ ನಾಯಕ ಕೆಎಸ್​ ಈಶ್ವರಪ್ಪ(K.S. Eshwarappa) ಅವರು ಇಂದು(ಏ.12) ಬೃಹತ್​ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೋದಿ ರೀತಿಯಲ್ಲಿ ಕಾಣುವ ಸದಾನಂದ್​ ನಾಯ್ಕ ಅವರು ಭಾಗಿಯಾಗಿ ಮಾತನಾಡಿ, ‘ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ನಾನು ಭಾಗಿ ಆಗಿದ್ದೆ. ಇದರಿಂದ ನನಗೆ ತುಂಬಾ ಖುಷಿ ಆಯ್ತು. ಮೋದಿ ಪ್ರೀತಿ ಮಾಡುವ ಜನರು ಎಲ್ಲರೂ ಒಂದಾಗಬೇಕು. ಮೆರವಣಿಗೆಯಲ್ಲಿ ನನ್ನ ನೋಡಿದ ಜನರು ತುಂಬಾ ಸಂತಸ ಪಟ್ಟಿದ್ದಾರೆ. ಇನ್ನು ನನ್ನ ಮುಖ ಮೋದಿ ಅವರ ರೀತಿಯಲ್ಲಿ ಕಾಣುತ್ತದೆ. ಈ ಹಿನ್ನಲೆಯಲ್ಲಿ ನನಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬಳಿಕ ಒಂದಿಷ್ಟು ಹಣ ನೀಡುತ್ತಾರೆ. ಕೊನೆಗೆ ಹೋಗುವಾಗ ಜನರು ನೂಕು ನುಗ್ಗಲು ಮಾಡಿ ತಳ್ಳುತ್ತಾರೆ. ಇದರಿಂದ ಮನಸ್ಸಿಗೆ ಬೇಸರ ಆಗುತ್ತದೆ ಎಂದು ಸಂತಸದ ಜೊತೆಗೆ ತಮ್ಮ ನೋವುನ್ನು ಹಂಚಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Apr 12, 2024 02:44 PM
Loading...
Unable to load recommendations.
Follow Us
ಬಸವರಾಜ್​ ಯರಗಣವಿ

ಬಸವರಾಜ್ ಯರಗಣವಿಯವರು ಮೂಲತಃ ಧಾರವಾಡ ಜಿಲ್ಲೆಯವರು. ಇವರು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ 2008ರ ಏಪ್ರಿಲ್ ನಿಂದ ವೃತ್ತಿ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 3 ವರ್ಷ, ನಂತರ ಹಾವೇರಿ ಜಿಲ್ಲೆಯಲ್ಲಿ 3 ವರ್ಷ ವರದಿಗಾರಿಕೆಯ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ, ಅಪರಾಧ, ಮಹತ್ವದ ಬೆಳವಣಿಗೆ ಹಾಗೂ ಮಾನವೀಯ ಸುದ್ದಿಗಳನ್ನು ವರದಿ ಮಾಡಿರುವ ಅನುಭವವಿದೆ.

Read More