ಲೋಕಸಭಾ ಚುನಾವಣೆ 2024: ಮೈಸೂರಿನ ಪುಟ್ಟ ಮಗುವಿನ ತೊದಲ ನುಡಿಯಲ್ಲಿ ಮತದಾನ ಜಾಗೃತಿ; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Apr 25, 2024 | 3:38 PM

ಲೋಕಸಭಾ ಚುನಾವಣೆ ಹಿನ್ನಲೆ ಹಲವಾರು ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ. ಅದರಂತೆ ನಾಳೆ(ಏ.26) ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಭರ್ಜರಿ ಸಿದ್ದತೆ ಮಾಡಲಾಗಿದೆ. ಈ ಮಧ್ಯೆ ಮೈಸೂರಿನ (Mysore) ಮರಿಮಲ್ಲಪ್ಪ ಶಾಲೆಯ ಎಲ್​ಕೆಜಿ ವಿದ್ಯಾರ್ಥಿನಿ ಯುಕ್ತಿ ಎಂಬ ಪುಟ್ಟ ಬಾಲಕಿ ತೊದಲ ನುಡಿಯಲ್ಲಿ ವಿಶೇಷವಾಗಿ ವಿಡಿಯೋ ಮಾಡಿ ಮತದಾನ ಜಾಗೃತಿ ಮೂಡಿಸಿದ್ದಾರೆ.

ಮೈಸೂರು, ಏ.25: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ(Voting) ಈಗಾಗಲೇ ಭರ್ಜರಿ ಸಿದ್ದತೆ ನಡೆದಿದೆ. ಅದರಂತೆ ಕಡ್ಡಾಯವಾಗಿ ಮತದಾನ ಮಾಡಲು ಹಲವು ರೀತಿಯಲ್ಲಿ ಜನರಿಗೆ ತಿಳಿಸಲಾಗಿದೆ. ಈ ಮಧ್ಯೆ ಮೈಸೂರಿನ (Mysore) ಮರಿಮಲ್ಲಪ್ಪ ಶಾಲೆಯ ಎಲ್​ಕೆಜಿ ವಿದ್ಯಾರ್ಥಿನಿ ಯುಕ್ತಿ ಎಂಬ ಪುಟ್ಟ ಬಾಲಕಿ ತೊದಲ ನುಡಿಯಲ್ಲಿ ವಿಶೇಷವಾಗಿ ವಿಡಿಯೋ ಮಾಡಿ ಮತದಾನ ಜಾಗೃತಿ ಮಾಡಿದ್ದಾರೆ. ಹೌದು, ‘ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ, ಏಪ್ರಿಲ್ 26ಕ್ಕೆ ತಪ್ಪದೇ ಮತದಾನ ಮಾಡಿ. ಅಪ್ಪ, ಅಮ್ಮ ಪೋಷಕರಿಗೂ ಮಕ್ಕಳು ಹೇಳಿ ಮತದಾನ ಮಾಡಿಸಿ, ಮತದಾನ ಮಾರಾಟಕ್ಕಿಲ್ಲ ನಮ್ಮ ಮತ, ನಮ್ಮ ಹಕ್ಕು ಎಂದು ಜಾಗೃತಿ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪುಟಾಣಿ ವಿಡಿಯೋ ವೈರಲ್ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More