Love-Dhoka Case: ಕಾರವಾರದಲ್ಲೊಂದು ಪ್ರೀತಿ-ಪ್ರೇಮ-ವಂಚನೆ ಪ್ರಕರಣ, ಯುವಕನ ಮನೆ ಮುಂದೆ ಧರಣಿ ಕೂತ ಯುವತಿ!

ಅರುಣ್​ ಕುಮಾರ್​ ಬೆಳ್ಳಿ

Updated on: May 17, 2023 | 10:32 AM

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಯುವತಿ ಎರಡು ದಿನಗಳಿಂದ ಅನ್ನ ನೀರಿಲ್ಲದೆ ಪ್ರತಿಭಟನೆ ಮಾಡುತ್ತಿದ್ದಾಳೆ.

ಕಾರವಾರ: ಇದು ಮತ್ತೊಂದು ಲವ್ (love), ಲೈಂಗಿಕ ಶೋಷಣೆ ಮತ್ತು ವಂಚನೆಯ (betrayal) ಕತೆ. ಇಲ್ಲಿ ಕೂತಿರುವ ಹಾವೇರಿಯ ಯುವತಿಯೊಬ್ಬಳು ಕಾರವಾರದ ಮುಂಡಗೋಡ ತಾಲ್ಲೂಕಿನ ಮೈನಳ್ಳಿಯ ಪ್ರಕಾಶ್ ಕಲಾಲ್ ಬದಶಂಕರ್ (Prakash Kalal Badashankar) ಹೆಸರಿನ ಯುವಕನಿಂದ ಮೋಸ ಹೋಗಿರುವುದಾಗಿ ಆರೋಪಿಸಿ ಅವನ ಮನೆಯ ಮುಂದೆ ಕೂತು ಮೌನವಾಗಿ ಪ್ರತಿಭಟಿಸುತ್ತಿದ್ದಾಳೆ. ಹಾವೇರಿಯ ರಾಣೆಬೆನ್ನೂರಿನಲ್ಲಿ ಅವರಿಬ್ಬರೂ ಯಾವುದೋ ಕೋರ್ಸಿನ ತರಬೇತಿಗೆ ಅಂತ ಹೋದಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿ ಅಂಕುರಿಸಿದೆ. ಯುವತಿಯ ಹೇಳುವ ಹಾಗೆ ಅವರಿಬ್ಬರು ಬೆಂಗಳೂರಿಗೆ ಹೋಗಿ ಸುತ್ತಾಡಿದ್ದಾರೆ ಮತ್ತು ಅಲ್ಲೇ ಅವರ ನಡುವೆ ದೈಹಿಕ ಸಂಬಂಧವೇರ್ಪಟ್ಟಿದೆ. ನಂತರ ಯುವತಿ ಮದುವೆ ಪ್ರಸ್ತಾಪ ಮಾಡಿದಾಗ, ಪ್ರಕಾಶ್, ನಿನ್ನೊಂದಿಗೆ ಟೈಂಪಾಸ್ ಮಾಡಿದ್ದು ಅನ್ನುತ್ತಿದ್ದಾನಂತೆ.  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಯುವತಿ ಎರಡು ದಿನಗಳಿಂದ ಅನ್ನ ನೀರಿಲ್ಲದೆ ಪ್ರತಿಭಟನೆ ಮಾಡುತ್ತಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.