Daily Devotional: ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?
ಶನಿವಾರವು ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮಂತನಿಗೆ ಮೀಸಲಾದ ದಿನವಾದರೂ, ಈ ದಿನ ಪ್ರಯಾಣಿಸುವುದರಿಂದ ಒಂದಷ್ಟು ಸಂಕುಚಿತ ಭಾವನೆಗಳು ಮನಸ್ಸನ್ನು ಆವರಿಸಬಹುದು ಎಂಬ ವೈಜ್ಞಾನಿಕ ಅಭಿಪ್ರಾಯವೂ ಇದೆ. ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಶನಿವಾರದಂದು ವ್ರತ ಅಥವಾ ಪೂಜೆಗಳನ್ನು ಆಚರಿಸುವವರಿಗೆ ದೈಹಿಕವಾಗಿ ಸ್ವಲ್ಪ ತೊಂದರೆಯಾಗಬಹುದು. ಅಲ್ಲದೆ, ಪೂರ್ವಿಕರ ಅನುಭವದಂತೆ, ಈ ದಿನದ ಭೇಟಿಯು ಅತ್ತೆಯ ಮನೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು ಅಥವಾ ಎರಡೂ ಕಡೆ ಮಾನಸಿಕ ಒತ್ತಡವನ್ನು ಸೃಷ್ಟಿಸಬಹುದು. ಈ ಎಲ್ಲಾ ಅಂಶಗಳು ನಂಬಿಕೆಗಳ ಆಧಾರದ ಮೇಲೆ ಶನಿವಾರದ ಪ್ರಯಾಣವನ್ನು ಅಷ್ಟು ಪ್ರಾಶಸ್ತ್ಯವಲ್ಲ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 06: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದೇವಾಲಯಗಳಲ್ಲಿ ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ತವರು ಮನೆಯು ಯಾವುದೇ ಹೆಣ್ಣುಮಗುವಿಗೆ ಸದಾ ವಿಶೇಷ ಬಾಂಧವ್ಯದ ತಾಣ. ಆದರೆ, ಶಾಸ್ತ್ರಗಳು ಮತ್ತು ಧರ್ಮಗಳ ಪ್ರಕಾರ, ಶನಿವಾರದಂದು ಅತ್ತೆಯ ಮನೆಯಿಂದ ತವರು ಮನೆಗೆ ಪ್ರಯಾಣಿಸುವುದು ಅಷ್ಟು ಶುಭಕರವಲ್ಲ ಎಂದು ಹೇಳಲಾಗುತ್ತದೆ.