Gadag: ವಿಜಯ ಸಂಕಲ್ಪ ಯಾತ್ರೆಯಲ್ಲಿ ಬೈಕ್ ರ‍್ಯಾಲಿ, ಪುಕ್ಕಟೆ ಪೆಟ್ರೋಲು, ಬಂಕ್ ಮುಂದೆ ನೂಕುನುಗ್ಗಲು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2023 | 5:11 PM

ಗದಗ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್ ಶೋ ನಡೆಸುತ್ತಿದ್ದಾರೆ ಅದರ ಜೊತೆಗೆ ಬೈಕ್ ರ‍್ಯಾಲಿ ಕೂಡ ನಡೆಯುತ್ತಿದೆ.

ಗದಗ: ಇಲ್ಲ ನೀವಂದುಕೊಳ್ಳುತ್ತಿರುವಂತೆ ಪೆಟ್ರೋಲ್ ಅಭಾವ ಎದುರಾಗಿದೆ ಅಂತೇನೂ ಸರ್ಕಾರ ಘೋಷಿಸಿಲ್ಲ, ಇದು ಎಲೆಕ್ಷನ್ ಟೈಮು ಸ್ವಾಮಿ, ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರಿಂದ ಕೂಪನ್ (coupon) ಪಡೆದು ವಾಹನಗಳಿಗೆ ಪುಕ್ಕಟೆಯಾಗಿ ಪೆಟ್ರೋಲ್ ತುಂಬಿಸಿಕೊಂಡವನೇ ಜಾಣ! ಈ ದೃಶ್ಯ ಕಂಡುಬಂದಿದ್ದು ಗದಗ-ಮುಳುಗುಂದ (Gadag-Mulgund) ರಸ್ತೆಯಲ್ಲಿರುವ ಪೆಟ್ರೋಲ್ ಬಂಕೊಂದರ ಮುಂದೆ. ಈ ಭಾಗದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ರೋಡ್ ಶೋ ನಡೆಸುತ್ತಿದ್ದಾರೆ ಅದರ ಜೊತೆಗೆ ಬೈಕ್ ರ‍್ಯಾಲಿ ಕೂಡ ನಡೆಯುತ್ತಿದೆ. ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡವೆರೆಲ್ಲ ರ‍್ಯಾಲಿಯಲ್ಲಿ ಭಾಗಿಯಾಗುತ್ತಾರೆಯೇ? ಗೊತ್ತಿಲ್ಲ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.