ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿ, ಕಳ್ಳತನ; ಭಾರತದಿಂದ ಖಂಡನೆ

Updated on: Feb 03, 2026 | 9:27 PM

ಭಾರತವು ಈ ವಿಷಯವನ್ನು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಚರ್ಚಿಸಿದೆ. ಪ್ರತಿಮೆಯನ್ನು ಕಳ್ಳತನ ಮಾಡಿದವರನ್ನು ತಕ್ಷಣ ಹುಡುಕಲು ಒತ್ತಾಯಿಸಲಾಗಿದೆ. ದಿ ಆಸ್ಟ್ರೇಲಿಯಾ ಟುಡೇ ಪ್ರಕಾರ, ಈ ಪ್ರತಿಮೆಯನ್ನು ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಉಡುಗೊರೆಯಾಗಿ ನೀಡಿತ್ತು. ಇದನ್ನು 12 ನವೆಂಬರ್ 2021ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಉದ್ಘಾಟಿಸಿದ್ದರು.

ನವದೆಹಲಿ, ಫೆಬ್ರವರಿ 3: ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕತ್ತರಿಸಿ ಕದಿಯಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತ ಒತ್ತಾಯಿಸಿದೆ. ಮೆಲ್ಬೋರ್ನ್‌ನ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್‌ನಲ್ಲಿರುವ ಮಹಾತ್ಮ ಗಾಂಧಿಯವರ (Mahatma Gandhi) ಕಂಚಿನ ಪ್ರತಿಮೆಯನ್ನು ಕದಿಯಲಾಗಿದೆ.

ಈ ಘಟನೆಗೆ ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತವು ಈ ವಿಷಯವನ್ನು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಚರ್ಚಿಸಿದೆ. ಪ್ರತಿಮೆಯನ್ನು ಕಳ್ಳತನ ಮಾಡಿದವರನ್ನು ತಕ್ಷಣ ಹುಡುಕಲು ಒತ್ತಾಯಿಸಲಾಗಿದೆ. ದಿ ಆಸ್ಟ್ರೇಲಿಯಾ ಟುಡೇ ಪ್ರಕಾರ, ಈ ಪ್ರತಿಮೆಯನ್ನು ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಉಡುಗೊರೆಯಾಗಿ ನೀಡಿತ್ತು. ಇದನ್ನು 12 ನವೆಂಬರ್ 2021ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಉದ್ಘಾಟಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More