Video: ತಂದೆ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ

Updated on: Mar 31, 2026 | 3:09 PM

ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಸಾಯಿ, ಮಾರ್ಚ್​ 31: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು ಗುರುತಿಸಲಾದ ಆರೋಪಿ ಅಮಾಯಕ ಮಗುವಿನ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 31, 2026 03:08 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More