ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Aug 18, 2026 | 6:19 AM

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಡಾ. ಬಸವರಾಜ ಗುರೂಜಿ ಅವರು 18-08-2026 ಮಂಗಳವಾರದ ದ್ವಾದಶ ರಾಶಿಗಳ ದಿನಭವಿಷ್ಯವನ್ನು ನೀಡಿದ್ದಾರೆ. ಶ್ರಾವಣ ಮಾಸದ ಮಂಗಳ ಗೌರಿ ವ್ರತದ ಮಹತ್ವ, ಗ್ರಹಗತಿಗಳು ಮತ್ತು ಪ್ರತಿ ರಾಶಿಯವರ ಆರ್ಥಿಕ, ಕೌಟುಂಬಿಕ, ಆರೋಗ್ಯ ಹಾಗೂ ವೃತ್ತಿಜೀವನದ ಕುರಿತು ವಿವರವಾದ ಮಾಹಿತಿ ಇಲ್ಲಿದೆ. ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳನ್ನೂ ತಿಳಿಸಲಾಗಿದೆ.

ಇಂದು 2026 ಆಗಸ್ಟ್ 18, ಮಂಗಳವಾರ, ಪರಾಭವ ನಾಮ ಸಂವತ್ಸರ, ಶ್ರಾವಣ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ ಇದ್ದು, ಚಿತ್ತಾ ನಕ್ಷತ್ರ, ಶುಭ ಯೋಗ, ಕೌಲವ ಕರಣಗಳ ಪ್ರಭಾವವಿದೆ. ಈ ದಿನದ ರಾಹುಕಾಲ ಮಧ್ಯಾಹ್ನ 3:29 ರಿಂದ 5:03ರ ವರೆಗೆ ಇರಲಿದೆ. ಸಂಕಲ್ಪ ಕಾಲ, ಸರ್ವಸಿದ್ಧಿ ಕಾಲವು ಮಧ್ಯಾಹ್ನ 12:23 ರಿಂದ 1:57ರ ವರೆಗೆ ಇದೆ. ಶ್ರಾವಣ ಮಾಸದ ಮಂಗಳವಾರವು ವಿಶೇಷವಾಗಿದ್ದು, ಪತಿಯ ಶ್ರೇಯಸ್ಸು, ಕುಟುಂಬದ ಯಶಸ್ಸು, ಸುಖ-ಶಾಂತಿ, ನೆಮ್ಮದಿ ಹಾಗೂ ಸಂತಾನಕ್ಕಾಗಿ ಮಹಿಳೆಯರು ಮಂಗಳಗೌರಿ ವ್ರತವನ್ನು ಆಚರಿಸುವ ಶುಭದಿನ ಇದಾಗಿದೆ. ಈ ದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More