ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
2026 ಜುಲೈ 27 ರ ಸೋಮವಾರದ ದೈನಂದಿನ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಈ ಮಂಗಳ ತ್ರಯೋದಶಿ ದಿನದಂದು ಗ್ರಹಗಳ ಸ್ಥಾನಗಳು, ಶುಭ ಮುಹೂರ್ತಗಳು ಮತ್ತು ವಿವಿಧ ರಾಶಿಗಳಾದ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ ರಾಶಿಗಳ ಮೇಲೆ ಚಂದ್ರನ ಸಂಚಾರದಿಂದ ಉಂಟಾಗುವ ಪರಿಣಾಮಗಳು ಮತ್ತು ಸೂಕ್ತ ಪರಿಹಾರಗಳ ಕುರಿತು ಮಾಹಿತಿ ನೀಡಿದ್ದಾರೆ.
ಇಂದು 2026 ಜುಲೈ 27 ರ ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9’ ಕನ್ನಡ ಡಿಜಿಟಲ್ನ ದಿನ ಭವಿಷ್ಯ ಕಾರ್ಯಮದಲ್ಲಿ ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿಯಂದು ಚಂದ್ರನು ಧನುಸ್ಸು ರಾಶಿಯ ಮೂಲಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ದಿನವು ಮಂಗಳ ತ್ರಯೋದಶಿಯಾಗಿದ್ದು, ಶುಭಕರವಾದ ಫಲಗಳನ್ನು ನೀಡುತ್ತದೆ. ಅಲ್ಲದೆ, ಲಯಕಾರಕ ಶಿವನ ಆರಾಧನೆಗೆ ಉತ್ತಮ ದಿನವಾಗಿದೆ. ಬೆಳಗ್ಗೆ 7:40 ರಿಂದ 9:15 ರವರೆಗೆ ರಾಹುಕಾಲವಿದ್ದರೆ, 9:14 ರಿಂದ 10:50 ರವರೆಗೆ ಶುಭಕಾಲ ಇರಲಿದೆ.
Loading...
Unable to load recommendations.
Follow Us
