Video: ಫ್ರಾನ್ಸ್​: ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ

Updated on: Jun 24, 2025 | 12:04 PM

ಫ್ರಾನ್ಸ್​​ನಲ್ಲಿ ಪ್ರತಿ ವರ್ಷ ಏರ್ಪಡಿಸುವ ಫೇಟ್ ಡೆ ಲಾ ಎನ್ನುವ ಬೀದಿ ಸಂಗೀತ ಉತ್ಸವದಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್​ ದಾಳಿ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ನಂತರ, ಪೊಲೀಸರು 12 ಶಂಕಿತರನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಸಂಜೆ, ಫೇಟ್ ಡೆ ಲಾ ಮ್ಯೂಸಿಕ್‌ ಫೆಸ್ಟಿವಲ್​ಗೆಂದು ಲಕ್ಷಾಂತರ ಮಂದಿ ಬೀದಿಯಲ್ಲಿ ನೆರೆದಿದ್ದರು.

ಪ್ಯಾರಿಸ್, ಜೂನ್ 24: ಫ್ರಾನ್ಸ್​​ನಲ್ಲಿ ಪ್ರತಿ ವರ್ಷ ಏರ್ಪಡಿಸುವ ಫೇಟ್ ಡೆ ಲಾ ಎನ್ನುವ ಬೀದಿ ಮ್ಯೂಸಿಕ್  ಫೆಸ್ಟಿವಲ್​​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್​ ದಾಳಿ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ನಂತರ, ಪೊಲೀಸರು 12 ಶಂಕಿತರನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಸಂಜೆ, ಫೇಟ್ ಡೆ ಲಾ ಮ್ಯೂಸಿಕ್‌ ಫೆಸ್ಟಿವಲ್​ಗೆಂದು ಲಕ್ಷಾಂತರ ಮಂದಿ ಬೀದಿಯಲ್ಲಿ ನೆರೆದಿದ್ದರು.

ಈ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು 140ಕ್ಕೂ ಹೆಚ್ಚಿನ ಜನರ ಮೇಲೆ ಸಿರಿಂಜ್​ನಿಂದ ಹಲ್ಲೆ ನಡೆಸಿದ್ದಾರೆ. ಆ ಸಿರಿಂಜ್​​ಗಳಲ್ಲಿ ಯಾವ ಮಾದರಿಯ ಔಷಧಗಳಿತ್ತು ಎಂಬುದನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ಕೆಲವರಿಗೆ ಹೊಟ್ಟೆ, ಕೆಲವರಿಗೆ ಕೈ, ಕೆಲವರಿಗೆ ಬೆನ್ನು ಹೀಗೆ ಸಿಕ್ಕ ಸಿಕ್ಕಲ್ಲಿ ಸಿರಿಂಜ್ ಚುಚ್ಚಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More