ಕುಡಿದ ಮತ್ತಲ್ಲಿ ಅಪಘಾತ ಮಾಡಿ ನಟ ಮಯೂರ್ ಪಟೇಲ್ ಹೇಳಿದ್ದೇನು?

Updated on: Jan 29, 2026 | 8:41 AM

Mayur Patel Car Accident Video: ಮಯೂರ್ ಪಟೇಲ್ ಅವರು ಕಾರು ಅಪಘಾತ ಮಾಡಿದ್ದಾರೆ. ದೊಮ್ಮಲೂರು ಸಮೀಪದ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ. ಮಯೂರ್ ಕುಡಿದು ಕಾರು ಓಡಿಸುತ್ತಿದ್ದರು. ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್​ ಎಂಬುವರ ಕಾರುಗಳು ಹಾಗೂ ಸರ್ಕಾರಿ ವಾಹನ ಜಖಂ ಆಗಿದೆ ಎಂದು ತಿಳಿದು ಬಂದಿದೆ.

ಕನ್ನಡದ ನಟ ಮಯೂರ್ ಪಟೇಲ್ ಚರ್ಚೆಯಲ್ಲಿದ್ದಾರೆ. ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಅಪಘಾತ ಮಾಡಿದ್ದಾರೆ. ಬೆಂಗಳೂರಿನ ದೊಮ್ಮಲೂರು ಬಳಿ ಈ ಅಪಘಾತ ನಡೆದಿದೆ. ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಮಯೂರ್ ಅವರ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಆ ಬಳಿಕ ಅವರು ಡ್ರೈವರ್ ಬಳಿ ಮಾತನಾಡಿದ್ದಾರೆ. ನಾನು ಕಾರು ಸರಿ ಮಾಡಿಸಿಕೊಡ್ತೀನಿ’ ಎಂದಿದ್ದಾರೆ. ಈ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 29, 2026 08:40 AM