ಹೊಸ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಬಂದ ಮೇಘನಾ ರಾಜ್

Updated on: Jun 01, 2026 | 9:01 AM

ಕಿರುತೆರೆಯಲ್ಲಿ ಧೂಳೆಬ್ಬಿಸಲು ಸಜ್ಜಾಗಿರುವ 'ಕ್ವಾಟ್ಲೆ ಕಿಚನ್ ಸೀಸನ್ 2'ಗೆ ನಟಿ ಮೇಘನಾ ರಾಜ್ ಜಡ್ಜ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮುಂಚೆ 'ಡ್ಯಾನ್ಸಿಂಗ್ ಚಾಂಪಿಯನ್ ಶಿಪ್' ಮೂಲಕ ಕಿರುತೆರೆ ಜರ್ನಿ ಆರಂಭಿಸಿದ್ದ ಅವರು, ಈಗ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲು ಹೊಸ ಅವತಾರದಲ್ಲಿ ಬರುತ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಈಗ ಭಾರಿ ಕುತೂಹಲ ಮೂಡಿಸಿದೆ. ಈ ಹೊಸ ಸೀಸನ್‌ಗೆ ಸ್ಟಾರ್ ನಟಿ ಮೇಘನಾ ರಾಜ್ ಅವರು ಮುಖ್ಯ ತೀರ್ಪುಗಾರರಾಗಿ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಹಿರಿತೆರೆಯಲ್ಲಿ ಮಿಂಚಿದ್ದ ಮೇಘನಾ, ಈ ಹಿಂದೆ ‘ಡ್ಯಾನ್ಸಿಂಗ್ ಚಾಂಪಿಯನ್ ಶಿಪ್’ ಶೋ ಮೂಲಕ ತಮ್ಮ ಯಶಸ್ವಿ ಕಿರುತೆರೆ ಜರ್ನಿ ಆರಂಭಿಸಿದ್ದರು. ಪ್ರೇಕ್ಷಕರನ್ನು ತಮ್ಮ ಹಸನ್ಮುಖಿ ನಗುವಿನಿಂದ ಸೆಳೆಯುವ ಅವರು, ಈಗ ಈ ವಿಶಿಷ್ಟ ಅಡುಗೆ ಶೋನಲ್ಲಿ ಸ್ಪರ್ಧಿಗಳ ಕ್ವಾಟ್ಲೆ ಮತ್ತು ಅಡುಗೆಯನ್ನು ಒಟ್ಟಿಗೆ ಜಡ್ಜ್ ಮಾಡಲಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More