‘ರಾಜಮಾರ್ತಾಂಡ’ ಮತ್ತು ಚಿರು ಬಗ್ಗೆ ಪತ್ನಿ ಮೇಘನಾ ಭಾವುಕ ಮಾತು

Updated on: Oct 02, 2023 | 8:47 AM

Dhruva Sarja: ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಹಾಗೂ ಚಿರು ಸಹೋದರ ಧ್ರುವ ಸರ್ಜಾ ಭಾಗಿಯಾಗಿದ್ದರು. ಚಿರು ನೆನಪುಗಳನ್ನು ಮೆಲುಕು ಹಾಕಿದರು ಮೇಘನಾ ರಾಜ್

ಚಿರಂಜೀವಿ ಸರ್ಜಾ (Chiranjeevi Sarja) ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಚಿರು ಸರ್ಜಾಗೆ ಅವರ ಸಹೋದರ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿರು ಪತ್ನಿ ನಟಿ ಮೇಘನಾ ರಾಜ್ ಸರ್ಜಾ ಹಾಗೂ ಸಹೋದರ ಧ್ರುವ ಸರ್ಜಾ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿನಿಮಾ ಕುರಿತು ಹಾಗೂ ಚಿರು ಸರ್ಜಾ ಕುರಿತು ಹಲವು ಭಾವುಕ ನೆನಪುಗಳನ್ನು ಮೇಘನಾ ರಾಜ್ ಸರ್ಜಾ ಹಂಚಿಕೊಂಡರು. ‘ರಾಜಮಾರ್ತಾಂಡ’ ಚಿರು ಸರ್ಜಾರ ಕೊನೆಯ ಸಿನಿಮಾ ಆಗುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ” ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More