ವಿಜಯಪುರದಲ್ಲಿ ಸಿದ್ದರಾಮಯ್ಯ ಗರ್ಭಗುಡಿ ಪ್ರವೇಶಿಸದ್ದನ್ನು ಸಮರ್ಥಿಸಿಕೊಂಡ ಸಚಿವ ಕೆಎನ್ ರಾಜಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Jan 04, 2024 | 2:32 PM

ಮಂಗಳವಾರದಂದು ವಿಜಯಪುರ ಜಿಲ್ಲೆಯ ದ್ಯಾಬೇರಿಗೆ ಹೋಗಿದ್ದಾಗ ಸಿದ್ದರಾಮಯ್ಯ, ಅಲ್ಲಿನ ದೇವಸ್ಥಾನವೊಂದರ ಉತ್ಸವದಲ್ಲಿ ಪಾಲ್ಗೊಂಡು ಅದರ ಗರ್ಭಗುಡಿ ಪ್ರವೇಶಿಸದೆ ಹೊರಗಿನಿಂದಲೇ ನಮಸ್ಕರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮುಖ್ಯಮಂತ್ರಿಯವರನ್ನು ಒಳಗೆ ಬರುವಂತೆ ಒತ್ತಾಯಿಸಿದರೂ ಅವರು ನಿರಾಕರಿಸಿದ್ದರು.

ತುಮಕೂರು: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಪತ್ರಕರ್ತರು ಎಸೆದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗರ್ಭಗುಡಿ ಪ್ರವೇಶಿಸದ ಅಂಶವನ್ನು ಸಮರ್ಥಿಸಿಕೊಂಡರು. ನಿಮಗೆ ಗೊತ್ತಿರುವ ಹಾಗೆ, ಮಂಗಳವಾರದಂದು ವಿಜಯಪುರ (Vijayapura) ಜಿಲ್ಲೆಯ ದ್ಯಾಬೇರಿಗೆ ಹೋಗಿದ್ದಾಗ ಸಿದ್ದರಾಮಯ್ಯ, ಅಲ್ಲಿನ ದೇವಸ್ಥಾನವೊಂದರ ಉತ್ಸವದಲ್ಲಿ ಪಾಲ್ಗೊಂಡು ಅದರ ಗರ್ಭಗುಡಿ ಪ್ರವೇಶಿಸದೆ ಹೊರಗಿನಿಂದಲೇ ನಮಸ್ಕರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮುಖ್ಯಮಂತ್ರಿಯವರನ್ನು ಒಳಗೆ ಬರುವಂತೆ ಒತ್ತಾಯಿಸಿದರೂ ಅವರು ನಿರಾಕರಿಸಿದ್ದರು. ಅವರ ವರ್ತನೆಯ ಬಗ್ಗೆ ಕೇಳಿದಾಗ ರಾಜಣ್ಣ, ಅದೊಂದು ವಿಷಯವೇ ಇಲ್ಲ, ಗರ್ಭ ಗುಡಿಯೊಳಗೆ ಅವರು ಹೋಗದಿರುವುದಕ್ಕೆ ಹಲವು ಕಾರಣಗಳಿರಬಹುದು, ಅದು ಚಿಕ್ಕದಾಗಿರುತ್ತಾದ್ದರಿಂದ ಸ್ಥಳದ ಅಭಾವ ಇರಬಹುದು, ಇಲ್ಲವೇ ಮತ್ತೇನೋ ಕಾರಣ ಇರಬಹುದು, ಅದರೊಳಗೆ ಪ್ರವೇಶಿಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ, ಪರ್ಸನಲ್ ವಿಷಯಗಳನ್ನು ಚರ್ಚಿಸಲಾದೀತೆ ಎಂದು ಹೇಳಿದ ಅವರು ಬೇಡರ ಕಣ್ಣಪ್ಪನ ಉದಾಹರಣೆಯನ್ನು ಉಲ್ಲೇಖಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.