‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ? ಉತ್ತರಿಸಿದ ಎಪಿ ಅರ್ಜುನ್

|

Updated on: Jul 27, 2024 | 8:17 AM

ನಿರ್ದೇಶಕ ಎಪಿ ಅರ್ಜುನ್ ಅವರು ಬೇರೆಯವರ ಜೊತೆ ಡೀಲ್ ಮಾಡಿಕೊಂಡು ನಿರ್ಮಾಪಕರು ನೀಡಿದ ಹಣದಲ್ಲೇ 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎನ್ನುವ ಆರೋಪ ಬಂದಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ನಿರ್ಮಾಪಕರ ಜೊತೆ ಮನಸ್ತಾಪ ಆಗಿರೋದು ಏಕೆ ಎಂಬುದನ್ನು ವಿವರಿಸಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಉದಯ್ ಕೆ. ಮೆಹ್ತಾ ಬಂಡವಾಳ ಹಾಕಿದ್ದಾರೆ. ಈ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅವರು ಬೇರೆಯವರ ಜೊತೆ ಡೀಲ್ ಮಾಡಿಕೊಂಡು ನಿರ್ಮಾಪಕರು ನೀಡಿದ ಹಣದಲ್ಲೇ 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎನ್ನುವ ಆರೋಪ ಬಂದಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ನಿರ್ಮಾಪಕರ ಜೊತೆ ಮನಸ್ತಾಪ ಆಗಿರೋದು ಏಕೆ ಎಂಬುದನ್ನು ವಿವರಿಸಿದ್ದಾರೆ. ‘ನಮ್ಮ ಸಿನಿಮಾ ಎಂದಲ್ಲ, ದೊಡ್ಡ ಬಜೆಟ್​ ಹಾಕಿ ಮಾಡುವ ಎಲ್ಲಾ ಸಿನಿಮಾಗಳಲ್ಲೂ ಸಾಮಾನ್ಯವಾಗಿ ನಿರ್ದೇಶಕರು-ನಿರ್ಮಾಪಕರು, ನಿರ್ದೇಶಕರು-ಛಾಯಾಗ್ರಾಹಕರ ಮಧ್ಯೆ ಕೆಲವು ವಿಚಾರಗಳಲ್ಲಿ ಮನಸ್ತಾಪ ಇದ್ದೇ ಇರುತ್ತದೆ. ಅದನ್ನು ಮೆಟ್ಟಿನಿಂತು ಮುಂದೆ ಸಾಗಿದಾಗ ಮಾತ್ರ ಸಿನಿಮಾ ಆಗುತ್ತದೆ’ ಎಂದಿದ್ದಾರೆ ಎಪಿ ಅರ್ಜುನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.