ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನೋಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2023 | 8:55 PM

ಆಪರೇಷನ್​ ಹಸ್ತದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಭೈರತಿ ಬಸವರಾಜ್​ ‘ಕಾಂಗ್ರೆಸ್​ನಿಂದ ನನಗೆ ಆಹ್ವಾನ ಬಂದಿಲ್ಲ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ ಮಾನ, ಗೌರವ ಎಲ್ಲವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ ಎಂದರು.

ಬೆಂಗಳೂರು, ಆ.24: ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಆಪರೇಷನ್​ ಹಸ್ತ ಸುರುವಾಗಿದೆ. ಅದರಂತೆ ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್​(Byrathi Basavaraj) ಅವರು ಕಾಂಗ್ರೆಸ್​ಗೆ ಸೇರ್ಪ​ಡೇ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ‘ಯಾವುದೇ ಕಾರಣಕ್ಕೂ ನಾನು ಭಾರತೀಯ ಜನತಾ ಪಕ್ಷ ತೊರೆಯಲ್ಲ. ನಾನು ಬಿಜೆಪಿ ಬಿಡುತ್ತಿದ್ದೇನೆಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಬಿಜೆಪಿ ಬಿಡುವ ಸಂದರ್ಭ ಬಂದರೆ ನಿವೃತ್ತಿಯಾಗಿ ಮನೆಯಲ್ಲಿರುವೆ ಎಂದರು.

ಕಾಂಗ್ರೆಸ್​ನಿಂದ ನನಗೆ ಆಹ್ವಾನ ಬಂದಿಲ್ಲ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ ಮಾನ, ಗೌರವ ಎಲ್ಲವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ. ಇನ್ನು ಎಸ್.ಟಿ. ಸೋಮಶೇಖರ್​ ಕೂಡ ಬಿಜೆಪಿ ಬಿಡುವುದಿಲ್ಲ ಅಂದಿದ್ದಾರೆ. ನಮ್ಮ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಬೇಕಿದೆ ಎಂದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ