ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು; ಮನೆ ಅಸ್ತವ್ಯಸ್ತ
ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ತಮ್ಮ ವಿಚಿತ್ರ ವರ್ತನೆಯಿಂದ ಇಡೀ ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ. ಅತಿರೇಕದ ಮಾತುಗಳು ಹಾಗೂ ಸಹಸ್ಪರ್ಧಿಗಳ ಜೊತೆಗಿನ ನಿರಂತರ ಜಗಳದಿಂದ ಮನೆಯ ನೆಮ್ಮದಿ ಕೆಟ್ಟಿದ್ದು, ಮಂಜು ಅವರ ಈ ರಂಪಾಟ ಸದ್ಯ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ‘ಮಾಡರ್ನ್ ಮಹಾಕವಿ ಮಂಜು’ಅವರ ಕಂಬ್ಯಾಕ್ ಆಗಿದೆ. ಅವರು ವಿಚಿತ್ರ ವರ್ತನೆ ಹಾಗೂ ಮಾತುಗಳ ಮೂಲಕ ಇಡೀ ಮನೆಯಲ್ಲಿ ದೊಡ್ಡ ಮಟ್ಟದ ಗಲಾಟೆ ಹಾಗೂ ಗೊಂದಲವನ್ನು ಸೃಷ್ಟಿಸಿದ್ದಾರೆ. ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಹದಗೆಡಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೂ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡಿರುವ ಮಂಜು, ತಮ್ಮ ಅತಿರೇಕದ ವರ್ತನೆಯಿಂದ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು. ಈಗ ಅವರು ಮತ್ತೆ ಮರಳಿದ್ದು, ಬಿಗ್ ಬಾಸ್ ಕೊಟ್ಟ ಟಾಸ್ಕ್ ನಿರ್ವಹಿಸಿದ್ದಾರೆ. ಇಡೀ ಮನೆಯನ್ನು ಅಸ್ತವ್ಯಸ್ತ ಮಾಡಿದ್ದಾರೆ. ಸ್ಪರ್ಧಿಗಳು ಇದನ್ನು ಕ್ಲೀನ್ ಮಾಡಬೇಕು. ಇದನ್ನು ಆಧರಿಸಿ, ಗ್ರೋಸರಿ ನೀಡಲಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
