Video: ಮಾಲ್ಡೀವ್ಸ್​​ನಲ್ಲಿ ಪ್ರಧಾನಿ ಮೋದಿಗೆ ಅಧ್ಯಕ್ಷ ಮುಯಿಝು ಅವರಿಂದ ಅಭೂತಪೂರ್ವ ಸ್ವಾಗತ

Updated on: Jul 25, 2025 | 12:45 PM

ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್​ ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಖುದ್ದಾಗಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೇ ಬಂದು ಅಭೂತಪೂರ್ವವಾಗಿ ಮೋದಿಯನ್ನು ಸ್ವಾಗತಿಸಿದ್ದಾರೆ. ಮುಯಿಝು ಅವರು ಮಾಲ್ಡೀವ್ಸ್​​ನ ಅಧ್ಯಕ್ಷರಾದ ಬಳಿಕವೇ ಭಾರತ ಹಾಗೂ ಮಾಲ್ಡೀವ್ಸ್​​ ನಡುವೆ ಸಂಬಂಧ ಹದಗೆಡಲು ಪ್ರಾರಂಭವಾಗಿತ್ತು. ಪ್ರಧಾನಿ ಮೋದಿ ಲಕ್ಷ್ಯದ್ವೀಪಕ್ಕೆ ಹೋಗಿರುವ ವಿಚಾರವನ್ನಿಟ್ಟುಕೊಂಡು ಅಲ್ಲಿನ ಸಚಿವರು ವ್ಯಂಗ್ಯವಾಡಿದ್ದರು.

ಮಾಲೆ, ಜುಲೈ 25: ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್​ ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಖುದ್ದಾಗಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೇ ಬಂದು ಅಭೂತಪೂರ್ವವಾಗಿ ಮೋದಿಯನ್ನು ಸ್ವಾಗತಿಸಿದ್ದಾರೆ. ಮುಯಿಝು ಅವರು ಮಾಲ್ಡೀವ್ಸ್​​ನ ಅಧ್ಯಕ್ಷರಾದ ಬಳಿಕವೇ ಭಾರತ ಹಾಗೂ ಮಾಲ್ಡೀವ್ಸ್​​ ನಡುವೆ ಸಂಬಂಧ ಹದಗೆಡಲು ಪ್ರಾರಂಭವಾಗಿತ್ತು. ಪ್ರಧಾನಿ ಮೋದಿ ಲಕ್ಷ್ಯದ್ವೀಪಕ್ಕೆ ಹೋಗಿರುವ ವಿಚಾರವನ್ನಿಟ್ಟುಕೊಂಡು ಅಲ್ಲಿನ ಸಚಿವರು ವ್ಯಂಗ್ಯವಾಡಿದ್ದರು.

ಇದಾದ ಬಳಿಕ ಭಾರತೀಯರು ಮಾಲ್ಡೀವ್ಸ್ ಭೇಟಿಯನ್ನು ಕಡಿಮೆ ಮಾಡಿದ್ದರು, ಅದರಿಂದ ದೇಶಕ್ಕೆ ಆರ್ಥಿಕವಾಗಿ ಹೊಡೆತ ಉಂಟಾಗಿತ್ತು. ಇದೀಗ ಮುಯಿಝು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.ಅಧ್ಯಕ್ಷ ಮುಯಿಝು ಜೊತೆಗೆ, ವಿದೇಶಾಂಗ ಸಚಿವರು, ರಕ್ಷಣಾ ಸಚಿವರು, ಹಣಕಾಸು ಸಚಿವರು ಮತ್ತು ಗೃಹ ಭದ್ರತಾ ಸಚಿವ ಶಮಿಹ್ ಸೇರಿದಂತೆ ಮಾಲ್ಡೀವ್ಸ್ ಸರ್ಕಾರದ ಅನೇಕ ಉನ್ನತ ಸಚಿವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More