ಮನೆಯ ಸದಸ್ಯನಾದ ಕೋತಿ: ಪ್ರತಿನಿತ್ಯ ಮನೆಯ ಮಕ್ಕಳ, ಯಜಮಾನನ ಜೊತೆ ಆಟ

Edited By: ವಿವೇಕ ಬಿರಾದಾರ

Updated on: Dec 30, 2023 | 1:05 PM

ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ರೈತ ಕೈದಾಳ್ ನಾಗರಾಜ್ ಎಂಬುವರ ಮನೆಯಲ್ಲಿ ಕೋತಿಯೊಂದು ನೆಲೆಸಿದೆ. ಇದು ಅಕ್ಷರಶಃ ಮನೆಯ ಸದಸ್ಯನಂತಾಗಿದೆ. ಈ ಕೋತಿ ಕಳೆದ ಆರು ತಿಂಗಳಿಂದ‌ ಕೈದಾಳ್ ನಾಗರಾಜ್ ಅವರ ಮನೆಯಲ್ಲೇ ‌ನೆಲೆಸಿದೆ.

ದಾವಣಗೆರೆ, ಡಿಸೆಂಬರ್​ 30: ಚನ್ನಗಿರಿ (Channagiri) ತಾಲೂಕಿನ ಬೆಳ್ಳಿಗನೂಡು ಗ್ರಾಮದ ರೈತ ಕೈದಾಳ್ ನಾಗರಾಜ್ ಎಂಬುವರ ಮನೆಯಲ್ಲಿ ಕೋತಿಯೊಂದು (Monkey) ನೆಲೆಸಿದೆ. ಇದು ಅಕ್ಷರಶಃ ಮನೆಯ ಸದಸ್ಯನಂತಾಗಿದೆ. ಈ ಕೋತಿ ಕಳೆದ ಆರು ತಿಂಗಳಿಂದ‌ ಕೈದಾಳ್ ನಾಗರಾಜ್ ಅವರ ಮನೆಯಲ್ಲೇ ‌ನೆಲೆಸಿದೆ. ಈ ಕೋತಿ ಬೆಳಿಗ್ಗೆ ಸಂಜೆ ಮಕ್ಕಳೊಂದಿಗೆ ಆಟವಾಡುತ್ತದೆ. ಮಕ್ಕಳು ಶಾಲೆಗೆ ಹೋದ ಬಳಿಕ ಮನೆ ಮನೆಯ ಯಮಾನರ ಜೊತೆ ಆಟವಾಡುತ್ತದೆ. ಈ ಕೋತಿಯ ಮೇಲೆ ಮನೆ ಮಂದಿಗೆ ಬಹಳ ಪ್ರೀತಿ. ಕೋತಿ ಆಟ ಮತ್ತು ಮನೆಯವರೊಂದಿಗೆ ಇರುವುದನ್ನು ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ. ಸದ್ಯ ಕೋತಿ ಗ್ರಾಮದಲ್ಲಿ ಮನೆ ಮಾತಾಗಿದೆ.

Published on: Dec 30, 2023 01:05 PM
Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More