Moto G Stylus 5G: ಬಹುನಿರೀಕ್ಷಿತ ಮೋಟೋ G Stylus 5G ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ
ಮೊಟೊರೊಲಾ ಕಂಪನಿ ಇದೀಗ ನೂತನ ಫೋನ್ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಬಹುನಿರೀಕ್ಷಿತ ಮೋಟೋ G Stylus 5G 2024 ಸ್ಮಾರ್ಟ್ಫೋನ್ ಅನ್ನು ಅಮೆರಿಕ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಅಮೆರಿಕದಲ್ಲಿ ಆರಂಭವಾಗಿ ಪ್ರಸ್ತುತ ಚೀನಾ ಮೂಲದ ಲೆನೊವೊ ಕಂಪನಿ ಪಾಲಾಗಿರುವ ಪ್ರಸಿದ್ಧ ಮೊಟೊರೊಲಾ ಕಂಪನಿ ಇದೀಗ ನೂತನ ಫೋನ್ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಬಹುನಿರೀಕ್ಷಿತ ಮೋಟೋ G Stylus 5G 2024 ಸ್ಮಾರ್ಟ್ಫೋನ್ ಅನ್ನು ಅಮೆರಿಕ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದು ಹೊಸ G- ಸರಣಿಯ ಕೊಡುಗೆಯಾಗಿ ಮತ್ತು ಮೋಟೋ G Stylus ಆವೃತ್ತಿಯ ಉತ್ತರಾಧಿಕಾರಿಯಾಗಿ ಅನಾವರಣಗೊಂಡಿದೆ. ಈ ಹ್ಯಾಂಡ್ಸೆಟ್ ಸ್ನಾಪ್ಡ್ರಾಗನ್ 6 Gen 1 SoC ಪ್ರೊಸೆಸರ್, 15W ವೈರ್ಲೆಸ್ ಚಾರ್ಜಿಂಗ್ ಬೆಂಬಲ ಮತ್ತು Android 14 OS ನೊಂದಿಗೆ ಲಭ್ಯವಿದೆ. ನೂತನ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.