ವಿದೇಶಿಗನ ಮೇಲೆ ಪ್ರಭಾವ ಬೀರಿದ ‘ಓಂ’, ತನ್ನ ಬೆನ್ನಿನ ಮೇಲೆ‌ ಓಂ ಟ್ಯಾಟೂ‌ ಹಾಕಿಸಿಕೊಂಡ‌ ಆ್ಯಂಡಿ

| Updated By: Rakesh Nayak Manchi

Updated on: Dec 11, 2022 | 10:10 AM

ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ವಿದೇಶಿಗರನ್ನು ಹೆಚ್ಚುಹೆಚ್ಚು ಆಕರ್ಷಿಸುತ್ತಿದೆ. ಇಂಗ್ಲೆಂಡ್​ನಿಂದ ಮೈಸೂರಿಗೆ ಬಂದ ವ್ಯಕ್ತಿಯೊಬ್ಬರು ಓಂ ಶಬ್ದದಿಂದ ಪ್ರಭಾವಿತರಾಗಿ ತನ್ನ ಬೆನ್ನಿಗೆ ಓಂ ಅನ್ನು ಟ್ಯಾಟೂ ಹಾಕಿಸಿದ್ದಾರೆ.

ಮೈಸೂರು: ಭಾರತದ ಸಂಸ್ಕೃತಿ (Culture of India), ಆಧ್ಯಾತ್ಮಿಕತೆ (Spirituality) ವಿದೇಶಿಗರನ್ನು ಹೆಚ್ಚುಹೆಚ್ಚು ಆಕರ್ಷಿಸುತ್ತಿದ್ದು, ಅನೇಕ ವಿದೇಶಿಗರು ಭಾರತಕ್ಕೆ ಬಂದು ಆಧ್ಯಾತ್ಮವನ್ನು ಕಲಿಯುತ್ತಿದ್ದಾರೆ. ಇದೀಗ ಇಂಗ್ಲೆಂಡ್​ನ ವ್ಯಕ್ತಿಯೊಬ್ಬರು ಮೈಸೂರಿಗೆ ಆಗಮಿಸಿ ಓಂ ಅನ್ನು ಹಚ್ಚೆ (Om tattoo) ಹಾಕಿಸಿಕೊಂಡಿದ್ದಾರೆ. ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ ಆ್ಯಂಡಿ, ಓಂ ಶಬ್ದದಿಂದ ಪ್ರಭಾವಿತರಾಗಿದ್ದು, ಓಂ ವಿಶ್ವದ ಮೊದಲ ಶಬ್ದ ಎಂದು ನಂಬಿದ್ದಾರೆ. ಅದರಂತೆ ಮೈಸೂರಿನ ಕುವೆಂಪುನಗರದ ಟ್ಯಾಟೂ ಅಂಗಡಿಗೆ ಹೋಗಿ ತನ್ನ ಬೆನ್ನಿನ ಮೇಲೆ ಓಂ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಆಧ್ಯಾತ್ಮದ ಹಿನ್ನೆಲೆ ಸಂಗೀತದೊಂದಿಗೆ ಟ್ಯಾಟು ಹಾಕಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Dec 11, 2022 10:10 AM